25 C
UDUPI
Friday, November 15, 2019

ಕರಾಚಿ-ರಾವಲ್ಪಿಂಡಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ : 65 ಮಂದಿ ಸಾವು

ಲಿಯಾಖತ್​ಪುರ: ಪಾಕಿಸ್ತಾನದ ಕರಾಚಿಯಿಂದ ಲಾಹೋರ್​ಗೆ ಸಂಚರಿಸುತ್ತಿದ್ದ ಕರಾಚಿ-ರಾವಲ್ಪಿಂಡಿ ತೇಜ್​ಗಾಮ್ ಎಕ್ಸ್​ಪ್ರೆಸ್​ ರೈಲು ಬೆಂಕಿನಲ್ಲಿ ಬೆಂಕಿ ಕಾಣಿಸಿಕೊಂಡು ಅನಾಹುತಕ್ಕೀಡಾಗಿದೆ. ಕನಿಷ್ಠ 65 ಮಂದಿ ಪ್ರಯಾಣಿಕರು ಈಗಾಗಲೇ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ....

ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿಯವರಿಗೆ “ಕನ್ನಡ ರತ್ನ” ಪ್ರಶಸ್ತಿ

ಅಬುಧಾಬಿ ; ದುಬೈನಲ್ಲಿ ವಾಸವಾಗಿರುವ ಅನಿವಾಸಿ ಕನ್ನಡಿಗರು  ನೀಡುವ ‘ಕನ್ನಡ ರತ್ನ‘ ಪ್ರಶಸ್ತಿಗೆ  ಈ ವರ್ಷ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಭಾಜನರಾಗಿದ್ದಾರೆ.ಈ ಕುರಿತು ದುಬೈ ಸಂಘದ ಮುಖ್ಯ ಸಂಚಾಲಕ ಮಲ್ಲಿಕಾರ್ಜುನ ಗೌಡ ಮಾತನಾಡಿ, ಈ ಬಾರಿ ಸುಧಾಮೂರ್ತಿ ಅವರನ್ನು ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ನ.8ರಂದು ಸಂಜೆ 4.30ಕ್ಕೆ ದುಬೈ ಮೇದಾನ್ ನಾದ್ ಅಲ್ ಶೀಬಾದಲ್ಲಿರುವ ಹಾರ್ಟ್ ಲ್ಯಾಂಡ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕನ್ನಡಿಗರು ಒಟ್ಟುಗೂಡಿ ನಾಡಹಬ್ಬ ಕನ್ನಡ ರಾಜ್ಯೋತ್ಸವ ಆಚರಿಸಲಿದ್ದು, ಇದೇ ಸಂದರ್ಭದಲ್ಲಿ ಸುಧಾಮೂರ್ತಿ ಅವರಿಗೆ 2019ನೇ ಸಾಲಿನ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು.ದುಬೈನಲ್ಲಿನ ಭಾರತದ ರಾಯಭಾರಿ ವಿಪುಲ್, ಕಾರ್ಗಿಲ್ 1999ರ ಯುದ್ಧದಲ್ಲಿ ಸೆಣೆಸಿದ ಸೇನಾಧಿಕಾರಿ ಕ್ಯಾಪ್ಟನ್ ನವೀನ್ ನಾಗಪ್ಪ ಅವರು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಭಾರತವನ್ನು ಬೆಂಬಲಿಸುವ ದೇಶದ ಮೇಲೆ ಮಿಸೈಲ್ ಹಾರಿಸುತ್ತೇವೆ – ಪಾಕ್ ಸಚಿವ

ಇಸ್ಲಾಮಾಬಾದ್: ಕಾಶ್ಮೀರದ ವಿಚಾರದಲ್ಲಿ ಭಾರತವನ್ನು ಬೆಂಬಲಿಸುವ ದೇಶಗಳ ಮೇಲೆ ಮಿಸೈಲ್ ಹಾರಿಸುತ್ತೇವೆಂದು ಪಾಕ್ ಸಚಿವ ಅಲಿ ಅಮೀನ್ ಗಂಧಾಪುರ್ ಹೇಳಿ ವಿವಾದ ಸೃಷ್ಟಿಸಿದ್ದಾನೆ. ಕಾಶ್ಮೀರದ ವಿಚಾರದಲ್ಲಿ ಭಾರತವನ್ನು ಬೆಂಬಲಿಸುವ ದೇಶಗಳ ವಿರುದ್ಧ ಹೋರಾಡುವುದು ನಮ್ಮ...

ಐಸಿಸ್ ಉಗ್ರ ಸಂಘಟನೆಯ ಸಂಸ್ಥಾಪಕ ಅಲ್ ಬಾಗ್ದಾದಿ ಆತ್ಮಹತ್ಯೆ – ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್​ : ಐಸಿಸ್​ ಉಗ್ರ ಸಂಘಟನೆಯ ಸಂಸ್ಥಾಪಕ ಹಾಗೂ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಸತ್ತಿದ್ದಾನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಘೋಷಣೆ ಮಾಡಿದ್ದಾರೆ.

ಅಮೇರಿಕಾದಿಂದ ಐ.ಎಸ್.ಐ.ಎಸ್ ಮುಖಂಡ ಅಲ್ ಬಗ್ದಾದಿ ಟಾರ್ಗೆಟ್ – ವರದಿ

ನ್ಯೂಯಾರ್ಕ್: ಅಮೇರಿಕಾದ ಅಧ್ಯಕ್ಷ ತನ್ನ ಟ್ವೀಟರ್ ನಲ್ಲಿ "ಶನಿವಾರ ರಾತ್ರಿ ಒಂದು ದೊಡ್ಡ ಕಾರ್ಯಚರಣೆ ನಡೆದಿದೆ" ಎಂದು ಟ್ವೀಟ್ ಮಾಡಿ ಅದಕ್ಕೆ ಹೆಚ್ಚಿನ ವಿವರಣೆ ನೀಡಿರಲಿಲ್ಲ. ಇದೀಗ ಅಮೇರಿಕಾ ಸರಕಾರದ ಮೂಲಗಳಿಂದ ಐ.ಎಸ್.ಐ.ಎಸ್ ಮುಖಂಡ...

ಭಾರತದಿಂದ ಬ್ರೆಜಿಲ್ ದೇಶಕ್ಕೆ ಪ್ರಯಾಣಿಸುವವರಿಗೆ ಸಿಹಿ ಸುದ್ದಿ !

ಬ್ರೆಜಿಲ್ : ಭಾರತ ಸೇರಿದಂತೆ ಕೆಲ ದೇಶಗಳಿಗೆ ಬ್ರೆಜಿಲ್ ಸರ್ಕಾರ ವೀಸಾ ವಿನಾಯಿತಿ ಘೋಷಣೆ ಮಾಡಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ‌ ಹೊಸ ಆದೇಶ ಹೊರಡಿಸಿದ್ದಾರೆ.

ಟರ್ಕಿ ಮೇಲೆ ಹೇರಿದ್ದ ನಿರ್ಬಂಧವನ್ನೂ ತೆಗೆದುಹಾಕೋದಾಗಿ ಘೋಷಿಸಿದ ಡೊನಾಲ್ಡ್ ಟ್ರಂಪ್

ಅಮೇರಿಕಾ : ಅಮೆರಿಕಾದ ಮಿತ್ರ ಸಿರಿಯನ್ ಕುರ್ದ್ಸ್​ ಆಡಳಿತದಲ್ಲಿದ್ದ ಈಶಾನ್ಯ ಸಿರಿಯಾದ ಪ್ರದೇಶಗಳ ಮೇಲೆ ಟರ್ಕಿ ಅಧಿಪತ್ಯ ಸಾಧಿಸಿದ ಬಳಿಕ ಅಕ್ಟೋಬರ್ 14ರಂದು ಅಮೆರಿಕಾ ನಿರ್ಬಂಧ ಹೇರಿತ್ತು ಆದರೆ ಇದೀಗ...

ದುಬೈ: ಅಕ್ಟೋಬರ್ 25ರಂದು KSCC ವತಿಯಿಂದ ‘ಟೋಲರೆನ್ಸ್ ಟ್ರೋಫಿ 2019’ ವಾಲಿಬಾಲ್ ಪಂದ್ಯಾಕೂಟ

ಕೆಎಸ್‌ಸಿಸಿ ಟಾಲರೆನ್ಸ್ ಟ್ರೋಫಿ - ವಾಲಿಬಾಲ್ ಪಂದ್ಯಾವಳಿ 2019 ರ ಅಕ್ಟೋಬರ್ 25 ರಂದು ದುಬೈನ ಅಲ್ ವಾಸ್ಲ್ ಕ್ಲಬ್‌ನಲ್ಲಿ ದುಬೈನಲ್ಲಿ ನಡೆಯಲಿದ್ದು, ಈ ಪ್ರಯುಕ್ತ ಪಂದ್ಯಾಕೂಟದ ಸಂಘಟನಾ ಸಮಿತಿ ರಚನೆ ಮತ್ತು...

ಎಕಾನಾಮಿಕ್ಸ್ ನಲ್ಲಿ ನೊಬೆಲ್ ಗೆದ್ದ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ!

ನ್ಯೂಯಾರ್ಕ್: ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ 2019 ನ್ನು ಪ್ರಖ್ಯಾತ ಅರ್ಥಶಾಸ್ತ್ರಜ್ಞರಾದ ಪ್ರೊ.ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಇಶ್ತೇರ್ ದುಫ್ಲೊ ಹಾಗೂ ಮೈಕಲ್ ಕ್ರೆಮೆರ್ ಹಂಚಿಕೊಂಡಿದ್ದಾರೆ. ಅಮೇರಿಕಾದ ಎಮ್.ಐ.ಟಿ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿರುವ ಅಭಿಜಿತ್...

ಟೋಕಿಯೋದಲ್ಲಿ ಭೀಕರ ಚಂಡಮಾರುತ – ಅಪಾರ ಹಾನಿ

ಜಪಾನ್: ಕಳೆದ ಅರುವತ್ತು ವರ್ಷದಲ್ಲಿ ಅತ್ಯಂತ ಭೀಕರ ಚಂಡಮಾರುತ ಟೋಕಿಯೊದಲ್ಲಿ ಬೀಸಿದ್ದು ಅಪಾರ ಹಾನಿಯುಂಟಾಗಿದೆ. ಇದು ಅಪ್ಪಳಿಸುವುದಕ್ಕೂ ಮುನ್ನ ಟೋಕಿಯೋ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಭಾರೀ ಮಳೆ, ಬಿರುಗಾಳಿ ಉಂಟಾಗಿದ್ದು, ಅಪಾರ ಪ್ರಮಾಣದ ಹಾನಿಯೂ...