25 C
UDUPI
Friday, November 15, 2019
Home ಟಾಪ್ ನ್ಯೂಸ್

ಟಾಪ್ ನ್ಯೂಸ್

ತುಮಕೂರಿನಲ್ಲಿ 66ನೇ ಅಖಿಲ ಭಾರತ ಸಹಕಾರ ಸಪ್ತಾಹ, ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿದ ಸಿ ಎಂ ಯಡಿಯೂರಪ್ಪ

ಬೆಂಗಳೂರು : ರಾಜ್ಯ ಸಹಕಾರ ಮಹಾಮಂಡಲ ನಿಯಮಿತದ ವತಿಯಿಂದ ತುಮಕೂರಿನಲ್ಲಿ ಆಯೋಜಿಸಿದ್ದ 66 ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಿ, ಸಹಕಾರ ರತ್ನ ಪ್ರಶಸ್ತಿ ಪ್ರದಾನ...

ಚಂದ್ರನ ಅಂಗಳಕ್ಕೆ ‘ಚಂದ್ರಯಾನ-3′ ಯೋಜನೆ ಮುಂದಿನ ನವೆಂಬರ್ ನಲ್ಲಿ ಸಾಕಾರಗೊಳ್ಳಬಹುದು – ಇಸ್ರೊ

ಚಂದ್ರನ ಅಂಗಳದಲ್ಲಿ ಮೃದು ನೆಲಸ್ಪರ್ಶಕ್ಕೆ (ಸಾಫ್ಟ್‌ ಲ್ಯಾಂಡಿಂಗ್‌) ಇನ್ನೊಂದು ಬಾರಿ ಪ್ರಯತ್ನಿಸಲಾಗುವುದು. ಬಹುಶಃ ಮುಂದಿನ ವರ್ಷ ನವೆಂಬರ್‌ನಲ್ಲಿ ‘ಚಂದ್ರಯಾನ-3′ ಯೋಜನೆ ಸಾಕಾರಗೊಳ್ಳಬಹುದು ಎಂದು ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೊದ ಮೂಲಗಳು ಗುರುವಾರ ತಿಳಿಸಿವೆ. ‘ಚಂದ್ರಯಾನ-3′ ಯೋಜನೆ ಬಗ್ಗೆ ವರದಿ ಸಿದ್ಧಪಡಿಸಲು ಈಗಾಗಲೇ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ತಿರುವನಂತಪುರದ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ವಿಜ್ಞಾನ ಕೇಂದ್ರದ ನಿರ್ದೇಶಕ ಎಸ್.ಸೋಮನಾಥ್ ಸಮಿತಿಯ ನೇತೃತ್ವ ವಹಿಸಿದ್ದಾರೆ. ಸಮಿತಿಯ ವರದಿ ಇನ್ನಷ್ಟೇ ಸಿದ್ಧವಾಗಬೇಕಿದೆ. ಮುಂದಿನ ವರ್ಷದ ಅಂತ್ಯದ ಒಳಗೆ ಯೋಜನೆ ಸಿದ್ಧಪಡಿಸುವಂತೆ ಸಮಿತಿಗೆ ಸೂಚನೆ ನೀಡಲಾಗಿದೆ ಎಂದು ಇಸ್ರೊದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ‘ನವೆಂಬರ್‌ ತಿಂಗಳು ಉಪಗ್ರಹ ಉಡಾವಣೆಗೆ ಸೂಕ್ತ ಸಮಯವಾಗಿದೆ. ರೋವರ್ ಮತ್ತು ಲ್ಯಾಂಡರ್‌ಗಳ ಲ್ಯಾಂಡಿಂಗ್ ಬಗ್ಗೆ ಈ ಬಾರಿ ಹೆಚ್ಚು ಗಮನಹರಿಸಲಾಗುವುದು. ‘ಚಂದ್ರಯಾನ-2′ರ ನ್ಯೂನತೆಗಳನ್ನು ಈ ಬಾರಿ ಸರಿಪಡಿಸಿಕೊಳ್ಳಲಾಗುವುದು‘ ಎಂದು ಇಸ್ರೊ ಮೂಲಗಳು ಹೇಳಿವೆ.

ಭಾರತೀಯ ಏರ್ಟೆಲ್ ಗೆ 23,045 ಕೋಟಿ ನಷ್ಟ!

ನವದೆಹಲಿ : ಭಾರತೀಯ ಏರ್‌ಟೆಲ್ ಸೆಪ್ಟೆಂಬರ್ 30 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ, 23,045 ಕೋಟಿ ನಷ್ಟವನ್ನು ಅನುಭವಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ. ಉದ್ಯಮದಾದ್ಯಂತದ ಸುದೀರ್ಘವಾದ ಪ್ರಕರಣಕ್ಕೆ ಸಂಬಂಧಿಸಿದಂತೆ 2019...

ಬಳ್ಳಾರಿ :ಶ್ರೀರಾಮುಲು ಜಿಲ್ಲೆಯ ರಾಜಕೀಯದಿಂದ ದೂರ ಸರಿಯುತ್ತಿದ್ದಾರೆಯೇ?

ಬಳ್ಳಾರಿ:ಬಳ್ಳಾರಿ ರಾಜಕೀಯ ಎಂದರೆ ತಕ್ಷಣ ನೆನಪಿಗೆ ಬರುತ್ತಿದ್ದದ್ದು ಬಿ. ಶ್ರೀರಾಮುಲು, ಜನಾರ್ದನ ರೆಡ್ಡಿ. ಈಗ ಕಾಲಚಕ್ರ ಒಂದು ಸುತ್ತು ತಿರುಗಿದೆ.ರೆಡ್ಡಿ ಬಳ್ಳಾರಿಯಲ್ಲಿಯೇ ಇಲ್ಲ, ಶ್ರೀರಾಮುಲು ಸಹ ಜಿಲ್ಲೆಯ ರಾಜಕೀಯದಿಂದ ದೂರ ಸರಿಯುತ್ತಿದ್ದಾರೆ ಎನ್ನಲಾಗುತ್ತಿದೆ....

ಅತ್ಯಂತ ಸಂತೋಷದಿಂದ ಎಲ್ಲರೂ ಬಿಜೆಪಿಗೆ ಸೇರಿದ್ದೇವೆ – ಎಚ್.ವಿಶ್ವನಾಥ್

ಬೆಂಗಳೂರು: ನಾವು 17 ಜನರು ಅತ್ಯಂತ ಸಂತೋಷದಿಂದ ಬಿಜೆಪಿಯನ್ನು ಸೇರಿದ್ದೇವೆ. ನಾವು ಬಹಳ ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದವರು. ಯಾವ ಸಂದರ್ಭದಲ್ಲಿ ಏನಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ ಎಂದು ಎಚ್ ವಿಶ್ವನಾಥ್ ಹೇಳಿದರು. ಜೆಡಿಎಸ್-ಕಾಂಗ್ರೆಸ್...

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ; ಬಿಜೆಪಿ 44, ಕಾಂಗ್ರೆಸ್ 14, ಎಸ್.ಡಿ.ಪಿ.ಐ 2 ರಲ್ಲಿ ಜಯಭೇರಿ.

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ 60 ವಾರ್ಡ್ ಗಳಲ್ಲಿ ಬಿಜೆಪಿ 44, ಕಾಂಗ್ರೆಸ್ 14 ಮತ್ತು ಎಸ್.ಡಿ.ಪಿ.ಐ 2 ಕ್ಷೇತ್ರದಲ್ಲಿ ಜಯಭೇರಿ ಸಾಧಿಸಿದೆ. ಇದರೊಂದಿಗೆ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಗಳಿಸಿದೆ. Ward number 01:...

ರೈಲು ಹರಿದು ನಾಲ್ವರು ಇಂಜಿನಿಯರ್ ವಿದ್ಯಾರ್ಥಿಗಳ ದಾರುಣ ಸಾವು

ತಮಿಳುನಾಡು :ತಮಿಳುನಾಡಿನ ಕೊಯಂಮುತ್ತೂರಿನಲ್ಲಿ ಹಳಿ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ರೈಲು ಹರಿದು ಸಾವನ್ನಪ್ಪಿದ್ದಾರೆ. ಮದ್ಯ ಸೇವಿಸಲು ನಾಲ್ವರೂ ಹಳಿ ಮೇಲೆ ಕುಳಿತ್ತಿದ್ದರು.ಮದ್ಯ ಸೇವಿಸಿ ಮೈ ಮರೆತ...

ಭಾರತದ ರಾಜಕೀಯಕ್ಕೆ ಅಭಿವೃದ್ದಿಯ ಭಾಷೆಯನ್ನು ಕೊಟ್ಟ ಪಂಡಿತ ಜವಾಹರಲಾಲ ನೆಹರೂ ಅವರನ್ನು ಅವರ ಜನ್ಮದಿನದಂದು ಗೌರವದಿಂದ ನೆನೆಯೋಣ –...

ಬೆಂಗಳೂರು :ಸಿದ್ದರಾಮಯ್ಯ ಅವರು "ತಮ್ಮ ರಾಜಕೀಯ ಬದುಕಿನುದ್ದಕ್ಕೂ ಸಾಂಪ್ರದಾಯಿಕ ಶಕ್ತಿಗಳು, ವಿಚ್ಛಿದ್ರಕಾರಿ ಧೋರಣೆ ಮತ್ತು ಕೋಮುವಾದಿ ಭಾವನೆಗಳ ವಿರುದ್ಧದ ಖಚಿತ ನಿಲುವಿನ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಗಟ್ಟಿ ಅಡಿಪಾಯ...

ರಫೆಲ್ ಹಗರಣ; ಮರು ಪರಿಶೀಲನೆ ಅರ್ಜಿ ವಜಾ; ಮೋದಿಗೆ ರಿಲೀಫ್

ನವದೆಹಲಿ: ರಫೇಲ್​​ ಒಪ್ಪಂದ ಸಂಬಂಧ ಸಲ್ಲಿಕೆಯಾಗಿದ್ದ ಮರುಪರಿಶೀಲನಾ ಅರ್ಜಿಗಳನ್ನ ಸುಪ್ರೀಂ ಕೋರ್ಟ್​ ವಜಾ ಮಾಡಿದೆ. ಈ ಮೂಲಕ ರಫೇಲ್​​​ ಡೀಲ್​​ ಬಗ್ಗೆ ಸಿಬಿಐ ತನಿಖೆ ನಡೆಸಲು ನಿರಾಕರಿಸಿ ತಾನು ನೀಡಿದ್ದ ತೀರ್ಪನ್ನು ಮರುಪರಿಶೀಲನೆ...

ಕಾಟಿಪಳ್ಳ ಉತ್ತರದಲ್ಲಿ ಎಸ್.ಡಿ.ಪಿ.ಐಗೆ ಗೆಲುವು!

ಮಂಗಳೂರು: ಮನಪಾ ಚುನಾವಣೆಯಲ್ಲಿ ಎಸ್‌ಡಿಪಿಐ ತನ್ನ ಖಾತೆ ತೆರೆದಿದ್ದು ಕಾಟಿಪಳ್ಳ ವಾರ್ಡಿನಲ್ಲಿ ಜಯ ಸಾಧಿಸಿದೆ. ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಲ್ಲಿ 6 ಜನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಈ...