ವಾಶಿಂಗ್ಟನ್: ತನ್ನ ಐದು ಮಕ್ಕಳನ್ನು ಬರ್ಬರವಾಗಿ ಕೊಂದ ಆರೋಪದಲ್ಲಿ ಅಮೇರಿಕ ವ್ಯಕ್ತಿಯೊಬ್ಬನಿಗೆ ಮರಣದಂಡನೆಯಾಗಿದೆ. ತನ್ನ ತಾಯಿಯೊಂದಿಗೆ ಸೇರಿ ತನ್ನ ಹತ್ಯೆಗೆ ಮಕ್ಕಳು ಚಿಂತಿಸುತ್ತಿದ್ದಾರೆಂಬ ಭ್ರಮೆಯಿಂದ ಕತ್ತು ಹಿಸುಕಿ ಮಕ್ಕಳನ್ನು ಕೊಂದಿದ್ದಾನೆ.

ಆರೋಪಿ ಟಿಮೋಟಿ ಜೋಮ್ಸ್ (37) ಮಕ್ಕಳ ದೇಹವನ್ನು ಬೆಟ್ಟವೊಂದರಲ್ಲಿ ಬಿಸಾಡುವ ಮುನ್ನ ತನ್ನ ಕಾರಿನಲ್ಲಿ ಒಂಭತ್ತು ದಿನ ಇಟ್ಟು ಸುತ್ತಾಡಿದ್ದು, ಕಾರಿನಲ್ಲಿ ಬರುತ್ತಿದ್ದ ದುರ್ಗಂಧದ ಆಧಾರದ ಮೇಲೆ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು.

ಇದೀಗ ನ್ಯಾಯಾಲಯ ಈತನಿಗೆ ಮರಣ ದಂಡನೆಯ ಶಿಕ್ಷೆ ವಿಧಿಸಿದೆ. ಆತನ ಪತ್ನಿ ತನ್ನ ಪತಿಯ ಜೀವ ಭಿಕ್ಷೆ ಬೇಡಿದರೂ ನ್ಯಾಯಾಲಯ ಪರಿಗಣಿಸಿಲ್ಲ. ಇದೇ ವೇಳೆ ಆಕೆ ಮಕ್ಕಳು ಅಪ್ಪನನ್ನು ತುಂಬಾ ಪ್ರೀತಿಸುತ್ತಿದ್ದರು ಎಂಬ ಮಾತನ್ನು ಹೇಳಿದ್ದಾಳೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.