ನವದೆಹಲಿ: ದೇಶದ ಟೆಲಿಕಾಂ ಉದ್ಯಮದ ಪೈಪೋಟಿಯಲ್ಲಿ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಬಿಎಸ್​ಎನ್​ಎಲ್​ ಮತ್ತು ಎಂಟಿಎನ್​ಎಲ್​ ಟೆಲಿಕಾಂ ಕಂಪನಿಯನ್ನು ಸ್ಥಗಿತಗೊಳಿಸಲು ಕೇಂದ್ರ ಹಣಕಾಸು ಸಚಿವಾಲಯ ಶಿಫಾರಸು ಮಾಡಿರುವುದಾಗಿ ಬುಧವಾರ ವರದಿಯಾಗಿದೆ.

ಈ ಎರಡು ಸರ್ಕಾರಿ ಕಂಪನಿಗಳನ್ನು ಮುಚ್ಚುವ ವೆಚ್ಚವು 95,000 ಕೋಟಿ ರೂಪಾಯಿಗಿಂತ ಹೆಚ್ಚು ತಗಲುವುದಿಲ್ಲ ಎಂದು ದೂರಸಂಪರ್ಕ ಇಲಾಖೆ (ಡಿಒಟಿ)ಯ ವರದಿ ಹೇಳುತ್ತಿದೆ. ಸ್ವಯಂ ನಿವೃತ್ತಿ ಯೋಜನೆ(ವಿಆರ್​​ಎಸ್​)ಯಡಿಯಲ್ಲಿ ಬಿಎಸ್​ಎನ್​ಎಲ್​ನ 1.65 ಲಕ್ಷ ಉದ್ಯೋಗಿಗಳು ಹಾಗೂ ಕಂಪನಿಯ ಸಾಲ ಮರುಪಾವತಿಗೆ 95,000 ಕೋಟಿ ರೂ. ತಗಲುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.