ನವದೆಹಲಿ: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಉಡುಪಿಯವರಾದ ಬಿ.ಎಲ್ ಸಂತೋಷ್ ಅವರನ್ನು ಅಮಿತ್ ಶಾ ನೇಮಿಸಿದ್ದಾರೆ. ಆರ್.ಎಸ್.ಎಸ್ ಗೆ ಹಿಂದಿರುಗಿದ ಸುದೀರ್ಘ ಸೇವೆ ಸಲ್ಲಿಸಿದ ರಾಮಲಾಲ್ ಅವರ ಸ್ಥಾನವನ್ನು ಬಿ.ಎಲ್ ಸಂತೋಷ್ ತುಂಬಲಿದ್ದಾರೆ.

ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ನಂತರ ಪ್ರಮುಖ ಸ್ಥಾನಕ್ಕೆ ಕನ್ನಡಿಗರೊಬ್ಬರ ಆಯ್ಕೆ ಇದೇ ಮೊದಲಾಗಿದ್ದು ಯಡಿಯೂರಪ್ಪ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಉಡುಪಿ ಜಿಲ್ಲೆಯವರಾದ ಬಿ.ಎಲ್.ಸಂತೋಷ್‌ ಅವರು ದಾವಣಗೆರೆಯ ಸರ್ಕಾರಿ ಬಿಡಿಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ (ಇನ್‌ಸ್ಟ್ರೆಮೆಂಟೇಷನ್‌ ಟೆಕ್ನಾಲಜಿ) ಪದವಿ ಪಡೆದಿದ್ದಾರೆ. ಎರಡೂವರೆ ವರ್ಷಗಳ ಕಾಲ ಟೆಲಿ ಕಮ್ಯುನಿಕೇಷನ್ಸ್‌ ಸಂಸ್ಥೆಯೊಂದರಲ್ಲಿ ಡಿಸೈನ್‌ ಎಂಜಿನಿಯರ್‌ ಆಗಿ ಅವರು ಕಾರ್ಯ ನಿರ್ವಹಿಸಿದ್ದರು.

ಆರ್‌ಎಸ್‌ಎಸ್‌ನಲ್ಲಿ ನಿರ್ವಹಿಸಿರುವ ಜವಾಬ್ದಾರಿ ಬಗ್ಗೆ ಹೇಳುವುದಾದರೆ ಬೆಂಗಳೂರಿನಲ್ಲಿ ನಗರ ಕಾರ್ಯವಾಹರಾಗಿ ಕಾರ್ಯ ನಿರ್ವಹಿಸಿದ್ದಾರೆ. 1993ರ ಜೂನ್‌ನಲ್ಲಿ ಪ್ರಚಾರಕ್‌ ಆಗಿ ಕಾರ್ಯ ಆರಂಭಿಸಿದರು. ಮೈಸೂರು ನಗರದಲ್ಲಿ ಒಂದು ವರ್ಷ ಮಂಡಲ ಪ್ರಚಾರಕ್‌, ಮೈಸೂರಿನಲ್ಲಿ ಮೂರು ವರ್ಷ ಜಿಲ್ಲಾ ಪ್ರಚಾರಕ್‌, ಶಿವಮೊಗ್ಗದಲ್ಲಿ ಎರಡು ವರ್ಷ ಜಿಲ್ಲಾ ಪ್ರಚಾರಕ್‌, ಬೆಂಗಳೂರಿನಲ್ಲಿ ಮೂರೂವರೆ ವರ್ಷ ಸಹ ವಿಭಾಗ ಪ್ರಚಾರಕ್‌ ಹಾಗೂ ಶಿವಮೊಗ್ಗದಲ್ಲಿ ನಾಲ್ಕೂವರೆ ವರ್ಷಗಳ ಕಾಲ ವಿಭಾಗ ಪ್ರಚಾರಕ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಸಂಘಟನಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.