ಉತ್ತರ ಪ್ರದೇಶ: ಕಾನೂನು ವಿದ್ಯಾರ್ಥಿನಿಯೊಬ್ಬಳು ದೆಹಲಿಯ ಪೊಲೀಸರು ಮತ್ತು ನ್ಯಾಯಧೀಶರ ಮುಂದೆ ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಚಿನ್ಮಯನಂದ್ ನಡೆಸಿರುವ ಅತ್ಯಾಚಾರದ ಭಯಾನಕತೆಯನ್ನು ಬಿಚ್ಚಿಟ್ಟಿದ್ದು , ತನ್ನನ್ನು ಅತ್ಯಾಚಾರ ಮಾಡಿ ಚಿತ್ರೀಕರಣ ನಡೆಸಿ, ಹೆದರಿಸಿ ಸುಮಾರು ಒಂದು ವರ್ಷ ತನ್ನ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ತಿಳಿಸಿದ್ದಾರೆ.

ಬಿಜೆಪಿಯ ಚಿನ್ಮಯನಂದ ಹಲವಾರು ಆಶ್ರಮಗಳನ್ನು ಹಾಗು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದು ಆತನ ರಾಕ್ಷಸೀಯ ಕೃತ್ಯ ಇದೀಗ ಜಗಜ್ಜಾಹೀರಾಗಿದೆ.

ವೀಡಿಯೋ ಚಿತ್ರೀಕರಣವನ್ನು ವೈರಲ್ ಮಾಡುವುದಾಗಿ ಬೆದರಿಸಿ ಈ ಹೇಯ ಕೃತ್ಯ ನಡೆಸಿರುವುದಾಗಿ ತನ್ನ 12 ಪುಟಗಳ ಆರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. 2018 ರಲ್ಲಿ ಕಾನೂನು ಕಾಲೇಜಿನ ಭರ್ತಿಯ ಹಿನ್ನಲೆಯಲ್ಲಿ ಮೊದಲು ಚಿನ್ಮಯನಂದನನ್ನು ಭೇಟಿಯಾದ ಸಂತ್ರಸ್ಥೆ ನಂತರ ತನ್ನ ನಂಬರ್ ಪಡೆದು ಹಿಂಸಿಸುತ್ತಿರುವ ಬಗ್ಗೆ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ತನಗೆ ಕಾಲೇಜಿನಲ್ಲಿ ವಿದ್ಯಾಭ್ಯಾಸದೊಂದಿಗೆ ಲೈಬ್ರರಿಯಲ್ಲಿ ಕೆಲಸ ನೀಡಿ 5000 ಸಂಬಳ ನೀಡುವುದಾಗಿಯೂ ಪುಸಲಾಯಿಸಿರುವ ಬಗ್ಗೆ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ನಂತರ ಒಂದು ದಿನ ಆಶ್ರಮಕ್ಕೆ ಕರೆದು ತಾನು ಹಾಸ್ಟೆಲ್ ನಲ್ಲಿ ಸ್ನಾನ ಮಾಡುವ ವೀಡಿಯೋ ತೋರಿಸಿ ವೈರಲ್ ಮಾಡುವ ಬೆದರಿಕೆ ಹಾಕಿದ ನಂತರ ತನ್ನ ಮೇಲೆ ಅತ್ಯಾಚಾರ ಮಾಡುವ ವೀಡಿಯೋ ವನ್ನು ಚಿತ್ರಿಕರೀಸಿದ್ದಾನೆ ಎಂದು ಸಂತ್ರಸ್ಥೆ ಅಳಲು ತೋಡಿಕೊಂಡಿದ್ದಾಳೆ.‌ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದರು ನಂತರ ದೆಹಲಿ ಪೊಲೀಸರಿಂದ ಪ್ರಕರಣ ದಾಖಲಿಸಲಾಗಿತ್ತು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ ಪ್ರಕರಣ ದಾಖಲಿಸುವಂತಾಗಿತ್ತು. ಸಂತ್ರಸ್ಥೆಗೆ ಉತ್ತರ ಪ್ರದೇಶದ ಪೊಲೀಸರ ಮೇಲೆ ನಂಬಿಕೆಯಿಲ್ಲವೆಂಬ ಮಾತುಗಳು ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಬಿಜೆಪಿ ಸರಕಾರ ಎಷ್ಟರ ಮಟ್ಟಿಗೆ ರಕ್ಷಣೆ ಒದಗಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಬಿಜೆಪಿ ಮುಖಂಡನ ಈ ಹೇಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಉನಾವೊ ಪ್ರಕರಣ ಕೂಡ ಈ ಮುಂಚೆ ಬಿಜೆಪಿ ಶಾಸಕನ ಕರಾಳ ಮುಖ ಹೊರ ಹಾಕಿತ್ತು. ಒಂದು ಕಡೆ ಬಿಜೆಪಿ ಬೇಟಿ ಬಚಾವೊ, ಬೇಟಿ ಪಡಾವೊ ಎನ್ನುತ್ತಿದ್ದಾರೆ ಮತ್ತೊಂದು ಕಡೆ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಮುನ್ನಲೆಗೆ ಬರುತ್ತಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.