ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚಿಸಿದರೂ ಸುಭದ್ರ ಅಂತು ಅಲ್ಲ – ಇಲ್ಲಿದೆ ಡಿಟೇಲ್ಸ್!

4891

ಬೆಂಗಳೂರು: ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ಈಗಾಗಲೇ ಪತನವಾಗಿದೆ. ಹದಿನೈದು ಮಂದಿ ಶಾಸಕರು ರಾಜೀನಾಮೆ ನೀಡಿ ಸರಕಾರವನ್ನು ಅತಂತ್ರಗೊಳಿಸಿ ಕೊನೆಯಲ್ಲಿ ವಿಶ್ವಾಸ ಮತ ಸಾಬೀತು ಪಡಿಸಲು ಸಾಧ್ಯವಾಗದೆ ಕುಮಾರ ಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಪತನಗೊಂಡಿದ್ದು ಇದೀಗ ಇತಿಹಾಸ!

ಆದರೆ ಈಗ ಮೈತ್ರಿ ಸರಕಾರದ ಪತನ ಬಿಜೆಪಿಗೆ ಸರಕಾರ ನಡೆಸಲು ಅನುಕೂಲವಾಗಿದ್ದರೂ ಅದು ದೀರ್ಘ ಕಾಲಕ್ಕೆ ಅಸಾಧ್ಯ. ಕಾರಣ ಸದ್ಯಕ್ಕೆ 20 ಶಾಸಕರು ಗೈರು ಹಾಜರಾದ ಹಿನ್ನಲೆಯಲ್ಲಿ ಸದನದಲ್ಲಿ ಮ್ಯಾಜಿಕ್ ನಂಬರ್ 103 ಕ್ಕೆ ಬಂದಿಳಿದಿತ್ತು. ಇದರರ್ಥ ಮುಂದಿನ ದಿನಗಳಲ್ಲಿ ರಾಜೀನಾಮೆ ನೀಡಿದ ಹದಿನೈದು ಮಂದಿ ಶಾಸಕರ ರಾಜೀನಾಮೆ ಅಂಗೀಕಾರವಾದರೆ ಮತ್ತೆ ಆ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದರೆ ಅಲ್ಲಿ ಬಿಜೆಪಿ ಸೋತರೆ ಮ್ಯಾಜಿಕ್ ನಂಬರ್ ಕಾಯ್ದುಕೊಳ್ಳುವುದು ಕಷ್ಟ ಏಕೆಂದರೆ ಮ್ಯಾಜಿಕ್ ನಂಬರ್ ಆಗ 113 ಆಗಿರುತ್ತದೆ.

ಒಂದು ವೇಳೆ ಗೈರಾದ ಶಾಸಕರು ಬಿಜೆಪಿ ಬಹುಮತ ಸಾಬೀತು ಪಡಿಸುವಾಗ ಅಡ್ಡಮತದಾನ ಮಾಡಿದರೆ ಯಡಿಯೂರಪ್ಪ ಕನಸು ಭಗ್ನವಾಗುತ್ತದೆ. ಯಾಕೆಂದರೆ ಎಲ್ಲ ಶಾಸಕರು ಉಪಸ್ಥಿತರಿದ್ದು ಬಹುಮತಕ್ಕೆ ಮ್ಯಾಜಿಕ್ ನಂಬರ್ 113 ಆಗುತ್ತದೆ. ಆಗ ಅಡ್ಡ ಮತದಾನ ಮಾಡಿದ ಶಾಸಕರು ಪಕ್ಷಾಂತರ ಕಾಯಿದೆಯ ಪ್ರಕಾರ ಅನರ್ಹರಾಗುತ್ತಾರೆ.

ಈಗ ಬಿಜೆಪಿಗೆ ರಾಜೀನಾಮೆ ನೀಡಿರುವ ಶಾಸಕರು ಯಾವುದೇ ಕಾರಣಕ್ಕೂ ಸದನಕ್ಕೆ ಬರದಂತೆ ನೋಡಿಕೊಳ್ಳುವುದು ಬಿಜೆಪಿಗಿರುವ ದೊಡ್ಡ ಸವಾಲು.

ಕಾಂಗ್ರೆಸ್, ಜೆ.ಡಿ.ಎಸ್ ಸೇರಿ ಮಾಸ್ಟರ್ ಪ್ಲ್ಯಾನ್ ಮಾಡಿ ಈಗಾಗಲೇ ಅವರ ರಾಜೀನಾಮೆ ಅಂಗೀಕರಿಸಿಲ್ಲ. ಇದರರ್ಥ ಬಿಜೆಪಿಗೆ ಮುಂದಿನ ದಿನಗಳಲ್ಲಿ ಖೆಡ್ಡಗೆ ಏಡುವಂತೆ ಮಾಡುವುದು. ಅದಕ್ಕಾಗಿ ಈಗ ಮೈತ್ರಿ ಪಕ್ಷ ನಾನ್ ಸ್ಟ್ರೈಕ್ ನಲ್ಲಿ ರಿಸ್ಕ್ ಫ್ರಿಯಾಗಿ ಆಡಿದರೆ ಯಡಿಯೂರಪ್ಪ ಅಧಿಕಾರಕ್ಕಾಗಿ ಈ ಎಲ್ಲ ಸವಾಲು ಮುಂದಿಟ್ಟು ಹೆಣಗಾಡಬೇಕಾಗುತ್ತದೆ. ಒಟ್ಟಿನಲ್ಲಿ ಈ ಗೊಂದಲ ಮುಂದುವರಿಯುತ್ತಾ ಶೀಘ್ರದಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆಯತ್ತ ಮುಖ ಮಾಡುವುದಂತೂ ಗ್ಯಾರಂಟಿ!

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.