ಬೇಕಾಗುವ ಪದಾರ್ಥಗಳು
  • ಪಲಾವ್ ಎಲೆ- 2-3
  • ಚಕ್ಕೆ – 2
  • ಲವಂಗ – 5
  • ಏಲಕ್ಕಿ –  2
  • ಮರಾಟಿ ಮೊಗ್ಗು – 1
  • ಜೀರಿಗೆ – 1 ಚಮಚ
  • ಸೋಂಪು – 1 ಚಮಚ
  • ತುಪ್ಪ – 1 ಚಮಚ
  • ಈರುಳ್ಳಿ – 1 ಸಣ್ಣಗೆ ಹೆಚ್ಚಿದ್ದು
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
  • ಹಸಿಮೆಣಸಿನ ಕಾಯಿ – 2-3
  • ಟೊಮೆಟೊ – ರುಬ್ಬಿದ್ದು 1 ಬಟ್ಟಲು
  • ಅರಿಶಿನ – ಅರ್ಧ ಚಮಚ
  • ಅಚ್ಚ ಖಾರದ ಪುಡಿ – 1 ಚಮಚ
  • ಬಿರಿಯಾನಿ ಪುಡಿ – 1 ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು
  • ಕ್ಯಾರೆಟ್ – 1 ಸಣ್ಣ ಬಟ್ಟಲು
  • ಬಟಾಣಿ – 1 ಸಣ್ಣ ಬಟ್ಟಲು
  • ಪುದೀನಾ – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಕೊತ್ತಂಬರಿ ಸೊಪ್ಪು – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ತೆಂಗಿನ ಕಾಯಿ ಹಾಲು – 1 ಬಟ್ಟಲು
  • ಅಕ್ಕಿ – ಬಟ್ಟಲು
 ಮಾಡುವ ವಿಧಾನ…
  • ಮೊದಲು ಕುಕ್ಕರ್ ತೆಗೆದುಕೊಂಡು ಅದಕ್ಕೆ 1 ಚಮಚ ತುಪ್ಪ, ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಮರಾಟಿ ಮೊಗ್ಗು, ಜೀರಿಗೆ, ಸೋಂಪು, ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
  • ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಕಾಯಿ, ರುಬ್ಬಿಕೊಂಡ ಟೊಮೆಟೋ ಹಾಕಿ ಚೆನ್ನಾಗಿ ಎಣ್ಣೆ ಪ್ರತ್ಯೇಕ ಗೊಳ್ಳುವವರೆಗೂ ಕೈಯಾಡಿಸಬೇಕು.
  • ಬಳಿಕ ಅರಿಶಿನದ ಪುಡಿ, ಅಚ್ಚ ಖಾರದ ಪುಡಿ, ಬಿರಿಯಾನಿ ಪುಡಿ, ಉಪ್ಪು, ಕ್ಯಾರೆಟ್, ಬಟಾಣಿ, ಪುದೀನಾ, ಕೊತ್ತಂಬರಿ ಸೊಪ್ಪು, ತೆಂಗಿನ ಕಾಯಿ ಹಾಲು, ನೀರು ಒಂದು ಬಟ್ಟಲು, ಅಕ್ಕಿಯನ್ನು ಹಾಕಿ ಕುಕ್ಕರ್ ಮುಚ್ಚಳವನ್ನು ಹಾಕಿ 2-3 ಕೂಗು ಬಂದ ಬಳಿಕ ತೆಗೆದರೆ ರುಚಿಕರವಾದ ಟೊಮೆಟೋ ಬಿರಿಯಾನಿ ಸವಿಯಲು ಸಿದ್ಧ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.