ನವದೆಹಲಿ: ಸಲ್ಮಾನ್ ಖಾನ್ ಬಿಗ್ ಬಾಸ್ ಶೊ‌ ಇದೀಗ ವ್ಯಾಪಕ ವಿವಾದಕ್ಕೆ ಈಡಾಗಿದ್ದು ಗಝಿಯಾಬಾದ್ ಶಾಸಕ ಕಿಶೋರ್ ಗುಜ್ಜರ್ ಕಾರ್ಯಕ್ರಮವನ್ನು ನಿಷೇಧಿಸುವಂತೆ ಕೋರಿ ಕೇಂದ್ರ ಸಚಿವ ಪ್ರಕಾಶ್ ಜವಾಡೆಕಾರ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಶೋ ನಲ್ಲಿ ಯುವತಿಯರು ಇನ್ನೊಂದು ಧರ್ಮದ ಯುವಕರೊಂದಿಗೆ ಹಾಸಿಗೆ ಹಂಚಿಕೊಳ್ಳಲು ಹೇಳಲಾಗುತ್ತದೆ. ಅಶ್ಲೀಲ ದೃಶ್ಯಗಳು ಈ ಕಾರ್ಯಕ್ರಮದಲ್ಲಿ ಪ್ರಸಾರಗೊಳ್ಳುತ್ತದೆ. ಮಕ್ಕಳು ಮತ್ತು ಯುವಕರ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ. ಇದು ಭಾರತೀಯ ಸಂಸ್ಕೃತಿಯ ವಿರುದ್ಧವಾಗಿದೆಯೆಂದು ಹೇಳಿದ್ದಾರೆ.

ಅದರೊಂದಿಗೆ ಈ ಕಾರ್ಯಕ್ರಮವನ್ನು ನಿಷೇಧಿಸುವರೆಗೆ ತಾನು ಹಣ್ಣು, ತರಕಾರಿ ತಿಂದು ಬದುಕುತ್ತೇನೆಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.