ಬಂಟ್ವಾಳ : ಜೀವನ ಮೌಲ್ಯಪಾಠ ಎಂಬ ಉದ್ದೇಶವನ್ನು ಇಟ್ಟಿಕೊಂಡು ಮೊಂಟೆಪದವಿನ ಸರಕಾರಿ ಹೈಸ್ಕೂಲ್ ವಿಭಾಗದ ಮಕ್ಕಳು ಅಸೈಗೋಳಿಯ ಅಭಯಸದನಕ್ಕೆ ಬೇಟಿ ನೀಡಿದರು. ಮಕ್ಕಳು ನಿರಾಶ್ರಿತರಾದ ವೃದ್ದರೊಂದಿಗೆ ಮತ್ತು ಅನಾಥರಾದ ಮಕ್ಕಳೊಂದಿಗೆ ಬೆರೆತು ನಳಿದಾಡಿ ಆಟ ಆಡಿಸಿ ಬಹುಮಾನಗಳನ್ನು ಹಂಚಿದರು, ಮಕ್ಕಳೇ ಹಣಸೇರಿಸಿ ತಂದಿದ್ದ ಹಣ್ಣುಹಂಪಲುಗಳನ್ನು ವಿತರಿಸಿದರು ಮಕ್ಕಳ ಬೇಟಿಯಿಂದ ಬಹಳ ಸಂತುಷ್ಠಗೊಂಡರು. ತದನಂತರ ಕೊಣಾಜೆ ಪೋಲೀಸ್ ಠಾಣೆಗೆ ಬೇಡಿನೀಡಿ ಪೋಲಿಸ್ ಅಧಿಕಾರಿಗಳಿಗಳೊಂದಿಗೆ ಸಮಾಲೋಚನೆ ನಡೆಸಿದರು ಮಕ್ಕಳ ಭವಿಷ್ಯದ ಬದುಕಿಗೆ ಇದೊಂದು ಉತ್ತಮ ಜೀವನ ಪಾಠವಾಗಿತ್ತು ಅದ್ಯಾಪಕರು ಮತ್ತು ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಟಿ.ಎನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.