ನವದೆಹಲಿ: ಕೇಂದ್ರ ಸರಕಾರವು ಮನಸೊ ಇಚ್ಚೆ ಬ್ಯಾಂಕ್ ವಿಲೀನ ಪ್ರಕ್ರಿಯೆ ಮುಂದುವರಿಸಿದ್ದು ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು ಇದೀಗ ಬ್ಯಾಂಕ್ ನೌಕರರು ಕೇಂದ್ರ ವಿಲೀನದ ನಿಲುವು ವಿರೋಧಿಸಿ ಸೆ.26,27 ರಂದು ಮುಷ್ಕರ ಆಯೋಜಿಸಿದ್ದಾರೆ.

ಹತ್ತು ರಾಷ್ಟ್ರೀಕೃತ ಬ್ಯಾಂಕ್ ಗಳ ವಿಲೀನವನ್ನು ವಿರೋಧಿಸಿ ಸೆಪ್ಟೆಂಬರ್ 25ರಮಧ್ಯರಾತ್ರಿಯಿಂದ ಎರಡು ದಿನಗಳ ಕಾಲ ಮುಷ್ಕರ ನಡೆಸಲು ನಾಲ್ಕು ಬ್ಯಾಂಕುಗಳ ಯೂನಿಯನ್ ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.

ಅಲ್ಲದೇ ಸಂಬಳ ಪುನರ್ ಪರಿಶೀಲನೆ, ವಾರದಲ್ಲಿ ಐದು ದಿನಗಳ ಕಾರ್ಯನಿರ್ವಹಣೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಕೆಗಾಗಿಯೂ ಆಗ್ರಹಿಸಿ ಈ ಮುಷ್ಕರ ನಡೆಸಲಾಗುತ್ತಿದೆ ಎಂದು ಬ್ಯಾಂಕ್ ನೌಕರರ ಯೂನಿಯನ್ ಹೇಳಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.