ಬೆಂಗಳೂರು: ನನ್ನ ಬಗ್ಗೆ ಎಂಟಿಬಿ ನಾಗರಾಜ್ ಕೀಳುಮಟ್ಟದ ಭಾಷೆ ಬಳಸಿದ್ದಾರೆ. ಅದು ಅವರ ಘನತೆಗೆ ತಕ್ಕುದಾಗಿದೆ. ರಾಕೇಶ್ ಸಾವಿನ ಬಗ್ಗೆ ಆಗ ಎಂಟಿಬಿ ನಾಗರಾಜ್ ಮಾತನಾಡದೆ, ಈಗ ಮಾತನಾಡುತ್ತಿದ್ದಾರೆ ಎಂದು ಬೈರತಿ ಸುರೇಶ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ” ನಾಗರಾಜ್ ಮೂರನೇ ದರ್ಜೆಯ ಹೇಳಿಕೆಗೆ ನಾನು ಮಾತನಾಡಿದರೆ ಜನತೆ ಮುಂದೆ ಹೊಗಲು ಆಗುವುದಿಲ್ಲ. ಸಿದ್ದರಾಮಯ್ಯನವರು ಅಹಿಂದ ಸೇರಿದಂತೆ ತುಳಿತಕ್ಕೊಳಗಾದ ಸಮಾಜದ ದನಿಯಾಗಿದ್ದಾರೆ. ಅವರಿಂದಲೇ ನಮ್ಮ ಸಮಾಜದ ಮುಖಂಡರು ಬೆಳೆದಿದ್ದಾರೆ. ಸಿದ್ದರಾಮಯ್ಯನವರ ಹೆಸರು ಹೇಳೋಕೆ ಎಂಟಿಬಿಗೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.

ಎಂಟಿಬಿ ನಾಗರಾಜ್ ಸಾವನ್ನು ರಾಜಕಾರಣಕ್ಕೆ ಬಳಸಿಕೊಳ್ಳುವ ಕೀಳುಮಟ್ಟಕ್ಕೆ ಇಳಿದಿದ್ದಾರೆ. ರಾಕೇಶ್ ನನ್ನ ಸಹೋದರ ಇದ್ದಹಾಗೆ. ಅವನ ಸಾವಿಗೆ ನಾನು ಕಾರಣ ಎಂಬುದು ನಾಗರಾಜ್ ಹತಾಶ ಮನೋಭಾವನೆಯನ್ನು ತೋರಿಸುತ್ತದೆ. ಈಗ ಹೋಸಕೋಟೆಯಲ್ಲಿ ಬಚ್ಚೇಗೌಡರು ಕಟ್ಟಿದ್ದ ಬಿಜೆಪಿಗೆ ಹೋಗಿ ಸೇರಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.