ಮೈಸೂರು: 73 ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಮೈಸೂರಿನ ನಂಜನಗೂಡಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ಕೇಸರಿ ಭಾಗವಧ್ವಜ ಹಾರಿಸಿ ವಿವಾದ ಸೃಷ್ಟಿಸಿದ್ದಾರೆ. ಅಮಾಯಕ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಕೃತ್ಯ ಎಸಗಿದ ಆರ್.ಎಸ್.ಎಸ್ ಕಾರ್ಯಕ್ರಮದಲ್ಲಿ ಹೆಡಗೆವಾರ್, ಗೋಳ್ವಾಲ್ಕರ್ ಫೋಟೊ ಕೂಡ ಬಳಸಿತ್ತು.

ನಂತರ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ ಸ್ವಾತಂತ್ರ್ಯ ದಿನಾಚರಣೆಯೆಂದು ನಡೆದ ಈ ಕೃತ್ಯವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ನಂತರ ತಹಶಿಲ್ದಾರ್ ಮತ್ತು ಪೊಲೀಸರು ಬಂದು ಸರಕಾರಿ ಜಾಗದಲ್ಲಿ ಈ ರೀತಿಯಾಗಿ ನಡೆದುಕೊಳ್ಳುವುದು ತಪ್ಪು. ಸರ್ಕಾರಿ ಜಾಗದಲ್ಲಿ ನೀವು ಈ ಕಾರ್ಯಕ್ರಮ ಮಾಡಲು ಅನುಮತಿ ಪಡೆದಿದ್ದೀರಾ? ಈ ಮೈದಾನದಲ್ಲಿ ಬೆಳಿಗ್ಗೆಯೇ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ್ದೇವೆ ಮತ್ತೆ ನೀವ್ಯಾಕೆ ಈ ರೀತಿ ಕೋಮು ಸಾಮರಸ್ಯ ಕೆಡಿಸುತ್ತೀದ್ದೀರಿ ಎಂದು ತರಾಟೆಗೆ ತೆಗೆದುಕೊಂಡು ತೆರವುಗೊಳಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

ದಲಿತ ಸಂಘಟನೆಗಳು ಭಾಗವ ಧ್ವಜ ತೆರವುಗೊಳಿಸಲು ಪಟ್ಟು ಹಿಡಿದಾಗ ಇದು ರಕ್ಷಾ ಬಂಧನ ಕಾರ್ಯಕ್ರಮ ಹೇಳಿಕೊಂಡಿದ್ದಾರೆ. ಆದರೆ ಅದಕ್ಕೆ ಖಾಸಗಿ ಜಾಗದಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ ಇಲ್ಲಿ ಅನುನತಿಯಿಲ್ಲದೆ ಇಂತಹ ಕೆಲಸ ಮಾಡಬಾರದೆಂದು ಹೇಳಿದಾಗ ಭಾಗವ ಧ್ಚಜ ತೆರವುಗೊಳಿಸಿದ್ದಾರೆ.

ನಂತರ ದಲಿತ ಸಂಘಟನೆಯ ಕಾರ್ಯಕರ್ತರು ರಾಷ್ಟ್ರಧ್ವಜಕ್ಕೆ ಬೆಲೆ ಕೊಡದೇ ಕೇಸರಿ ಧ್ವಜ ಹಾರಿಸುವವರು ದೇಶದ್ರೋಹಿಗಳಲ್ಲವೇ? ಎಂದು ಪ್ರಶ್ನಿಸಿದರು. ನಂತರ ಕೇಸರಿ ಧ್ವಜವನ್ನು ತೆರವುಗೊಳಿಸಲಾಯಿತು ಮತ್ತು ಪೊಲೀಸರು ಅಲ್ಲಿದ್ದವರನ್ನು ಹೊರಗೆ ಕಳಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.