ಮನೆಯಲ್ಲಿ ಇಂದೆ ತಯಾರಿಸಿ ಸವಿಯಿರಿ ರುಚಿಕರವಾದ ಬಾದಾಮಿ ಫಿರ್ನಿ

ಬೇಕಾಗುವ ಪದಾರ್ಥಗಳು

  • ಬಾದಾಮಿ- 1 ಬಟ್ಟಲು (ನೆನೆಸಿ ಸಿಪ್ಪೆ ತೆಗೆದದ್ದು)
  • ಹಾಲು – ಅರ್ಧ ಲೀಟರ್
  • ಸಕ್ಕರೆ- 100 ಗ್ರಾಂ
  • ಅಕ್ಕಿ-  2 ಚಮಚ
  • ಏಲಕ್ಕಿ ಪುಡಿ – ಅರ್ಧ ಚಮಚ
  • ರೋಸ್ ವಾಟರ್- 1 ಚಮಚ
 ಮಾಡುವ ವಿಧಾನ…
  • ಒಲೆಯ ಮೇಲೆ ಪಾತ್ರಯೊಂದನ್ನು ಇಟ್ಟು ಅದಕ್ಕೆ ಹಾಲು ಹಾಕಿ ಬಿಸಿ ಮಾಡಬೇಕು. ನಂತರ ಅಕ್ಕಿಯಲ್ಲಿರುವ ನೀರನ್ನು ತೆಗೆದು ಚೆನ್ನಾಗಿ ರುಬ್ಬಿಕೊಳ್ಳಬೇಕು.
  • ಕಾಯಿಸಿಕೊಂಡ ಹಾಲಿಗೆ ರುಬ್ಬಿಟ್ಟುಕೊಂಡ ಸಕ್ಕರೆ, ಏಲಕ್ಕಿ ಪುಡಿ ಹಾಕಿ, ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಉರಿಯನ್ನು ಸಣ್ಣ ಮಾಡಿ, ಕತ್ತರಿಸಿಕೊಂಡ ಬಾದಾಮಿ ಹಾಕಿ 2 ನಿಮಿಷ ಕುದಿಯಲು ಬಿಡಬೇಕು. ತದನಂತರ ರುಬ್ಬಿಕೊಂಡ ಅಕ್ಕಿಯನ್ನು ನಿಧಾನಗತಿಯಲ್ಲಿ ಮಿಶ್ರಣ ಮಾಡಬೇಕು. ಹಾಲು ಗಟ್ಟಿಯಾಗುವವರೆಗೂ ಕೈಯಾಡಿಸುತ್ತಿರಬೇಕು. ಹಾಲು ಗಟ್ಟಿ ಬರುತ್ತಿದ್ದಂತೆಯೇ ಒಲೆಯನ್ನು ಆರಿಸಿ, ರೋಸ್ ವಾಟರ್ ಮತ್ತು ಹಾಕಬೇಕು.
  • ಇದು ತಣ್ಣಗಾದ ಬಳಿಕ ಫ್ರಿಡ್ಜ್ ನಲ್ಲಿಟ್ಟು ಮತ್ತಷ್ಟು ತಣ್ಣಗೆ ಮಾಡಿದರೆ ರುಚಿಕರವಾದ ಬಾದಾಮಿ ಫಿರ್ನಿ ಸವಿಯಲು ಸಿದ್ಧ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.