ಸಾವು ಬದುಕಿನ ಹೋರಾಟದಲ್ಲಿ ಇರುವ ಎರಡು ತಿಂಗಳ ಮಗುವಿನ ಚಿಕಿತ್ಸೆಗೆ ನೆರವಾಗುವಿರಾ?

231

– ಆಶಿಕ್ ಕುಕ್ಕಾಜೆ

ಬಂಟ್ವಾಳ ತಾಲೂಕು ತೆಂಕ ಕಜೆಕಾರು ಗ್ರಾಮದ ಬುಲೆಕ್ಕಿಲ್ಲ ಎಂಬಲ್ಲಿಯ ನಿವಾಸಿ ಸತೀಶ್ ಹಾಗೂ ಮಮತಾ ದಂಪತಿ. ಇವರಿಗೆ ಜನಿಸಿದ ಮುದ್ದಾದ 2 ತಿಂಗಳ ಕಂದ ರಿಶಿಕಾ. ತಾಯಿಯ ಗರ್ಭದಿಂದ ಇಳೆಗೆ ಬಂದಾಗ ರಿಶಿಕಾ ಎಲ್ಲ ಮಕ್ಕಳಂತೆ ಆರೋಗ್ಯದಿಂದ ಇತ್ತು. ಮಗುವಿನ ಕಿಲ ಕಿಲ ನಗುವಿನಿಂದ ಕುಟುಂಬದಲ್ಲೂ ಆನಂದದ ಹೊಳೆ ಹರಿದಿತ್ತು.

ಆದರೆ, ಮಗು ಜನಿಸಿದ ಒಂದು ತಿಂಗಳ ಬಳಿಕ ಮಗುವಿನ ರಕ್ತದಲ್ಲಿ ವಿಚಿತ್ರ ಗುಣಲಕ್ಷಣ ಕಂಡುಬಂತು. ವೈದ್ಯರಲ್ಲಿ ಪರೀಕ್ಷೆ ಮಾಡಿದಾಗ ಮಗುವಿನಲ್ಲಿ ರಕ್ತಕ್ಕೆ ಸಂಬಂಧಿಸಿದ ಅಪರೂಪದ ಖಾಯಿಲೆ ಇದೆ ಎಂದು ಗೊತ್ತಾಯಿತು.

ಇದೀಗ ಎರಡು ತಿಂಗಳ ಪುಟಾಣಿ ರಿಶಿಕಾ ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದೆ. ಪ್ರತಿದಿನ ರೂ. 5000 ದಿಂದ 10,000 ರೂ. ಬಿಲ್ ಆಗುತ್ತಿದೆ. ಬಡ ಕುಟುಂಬ ಇದುವರೆಗೆ ಇದ್ದ ಎಲ್ಲ ಖರ್ಚನ್ನೂ ನಿಭಾಯಿಸಿದೆ. ಆದರೆ, ಇದೀಗ ಮಗುವಿನ ಆಸ್ಪತ್ರೆ ಬಿಲ್, ವೈದ್ಯಕೀಯ ವೆಚ್ಚ ಭರಿಸಲು ಹೆಣಗಾಡುತ್ತಿದೆ. ರಿಶಿಕಾ ಗುಣಮುಖರಾಗುವ ಹಂತದಲ್ಲಿ ಈಗಾಗಲೇ 2 ಲಕ್ಷಕ್ಕೂ ಅಧಿಕ ಪಾವತಿಸಿದ್ದು, ಇನ್ನೂ ಕೂಡಾ ಹಣದ ಅಗತ್ಯವಿದೆ.

ಆಸ್ಪತ್ರೆಗೆ ಭೇಟಿ ನೀಡಿ ಆ ಪುಟ್ಟ ಕಂದಮ್ಮನ ಮುಖ ನೋಡಿ ಮನಸ್ಸು ಮತ್ತಷ್ಟು ಭಾರವಾಯಿತು. ಆ ಮಗುವಿಗೆ ಚಿಕಿತ್ಸೆ ನೀಡಿ ಆರೋಗ್ಯವಂತಳಾಗಿ ಮಾಡುವ ಜವಾಬ್ದಾರಿ ನಮ್ಮ ಕೈಯಲ್ಲಿದೆ. ಮುದ್ದಾದ ಎರಡು ತಿಂಗಳ ಕಂದಮ್ಮನನ್ನು ಉಳಿಸಲು ಮಾತೃ ಹೃದಯ ಹೆಣಗಾಡುತ್ತಿದೆ. ತಂದೆ ತಾಯಿಯ ಅಲೆದಾಟ, ಮೂಕವೇದನೆಯ ಜೊತೆಗೆ ಹಣದ ತುರ್ತು ಅಗತ್ಯವಿದೆ. ತನ್ನ ಕಂದನನ್ನು ಉಳಿಸಿಕೊಳ್ಳಲು ಹಣದ ದಾರಿ ಇಲ್ಲದೆ ಇರುವ ತಂದೆ ತಾಯಿಗೆ ನೆರವಾಗೋಣವೇ?

ಮಾನವೀಯ ಹೃದಯದ ದಾನಿಗಳು ಮುಂದೆ ಬಂದು ಸಹಾಯ ಮಾಡಬೇಕಾಗಿ ವಿನಂತಿ. ಮಗುವಿನ‌ ಪೋಷಕರ ಸಂಪರ್ಕ ಸಂಖ್ಯೆ 9901294886 ಬ್ಯಾಂಕ್ ಖಾತೆ ವಿವರ ಈ ಕೆಳಗೆ ತಿಳಿಸಿದೆ.

Bank Name: Vijaya Bank
Account holder name: Sathish
Account No.: 153601011003083
Branch: Kakyapadav
IFS Code: VIJB0001536

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.