ಬಿಹಾರ್ : ಭೂಪಾಲ್ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶಂಕಿತ ಭಯೋತ್ಪಾದಕಿ ಸಾಧ್ವಿ ಪ್ರಜ್ಙಾ ಸಿಂಗ್ ಗೆ ಜೈಲಿನಲ್ಲಿ ನೀಡಿದ ಅತೀವ ಕಿರುಕುಳದಿಂದ ಕ್ಯಾನ್ಸರ್ ಕಾಯಿಲೆ ಉಂಟಾಯಿತು ಎಂದು ಹೇಳಿಕೆ ನೀಡುವುದರ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಇವರು ಬಿಹಾರದ ಪಾಟ್ನಾದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರಾರ್ಥವಾಗಿ ಆಗಮಿಸಿದ್ದು, ಈ ವೇಳೆ ಮಾತನಾಡಿದ ಬಾಬಾ ರಾಮ್ ದೇವ್, ‘ರಾಷ್ಟ್ರವಾದಿ, ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಜೈಲಿನಲ್ಲಿ ಒಂಬತ್ತು ವರ್ಷಗಳ ಕಾಲ ಸತತ ಕಿರುಕುಳ ನೀಡಿದ್ದರು. ಆ ಒತ್ತಡದಿಂದಲೇ ಕ್ಯಾನ್ಸರ್ ಕಾಯಿಲೆ ಆರಂಭವಾಗಿತ್ತು. ಯಾವ ತಪ್ಪೂ ಮಾಡದ ಸಾಧ್ವಿ ಅವರನ್ನು ಕೇವಲ ಶಂಕೆಯ ಮೇರೆಗೆ ಬಂಧನಕ್ಕೀಡು ಮಾಡಿದ್ದರು. ಅಲ್ಲದೆ ಅವರನ್ನು ಒಂಬತ್ತು ವರ್ಷ ಜೈಲಿನಲ್ಲಿಟ್ಟು ಹಿಂಸಿಸಲಾಗಿತ್ತು. ಅವರ ಮೇಲೆ ನಡೆದ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳ ಒತ್ತಡ ತಾಳಲಾರದೆ ಅವರು ಕ್ಯಾನ್ಸರ್ ಗೆ ತುತ್ತಾಗುವಂತಾಯಿತು ಎಂದು ಹೇಳಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.