ಲಂಡನ್​: ಐಸಿಸಿ ವಿಶ್ವಕಪ್​ನ 20ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್​ ಶ್ರೀಲಂಕಾ ವಿರುದ್ಧ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ 87 ರನ್​ಗಳಿಂದ ಭರ್ಜರಿ ಜಯಗಳಿಸಿದೆ.

ಕೆನ್ನಿಂಗ್ಟನ್​ ಓವಲ್​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರಂಭಿಕ ಆಟಗಾರ, ನಾಯಕ ಆರೋನ್​ ಫಿಂಚ್​ರ (153) ಭರ್ಜರಿ ಶತಕದ ನೆರವಿನಿಂದ ಶ್ರೀಲಂಕಾಕ್ಕೆ 335 ರನ್​ಗಳ ಬೃಹತ್​ ಮೊತ್ತದ ಗುರಿ ನೀಡಿತ್ತು.

ಇದನ್ನು ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ದೊರಕಿತಾದರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಆಸ್ಟ್ರೇಲಿಯಾ ಬೌಲರ್​ಗಳ ಬೌಲಿಂಗ್​ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ಶ್ರೀಲಂಕಾ ಪರ ಧೀಮತ್​ ಕರುನರತ್ನೆ (97), ಕುಶಾಲ ಪೆರೆರಾ (52) ಉತ್ತಮ ಆರಂಭ ನೀಡಿದರು. ಮದ್ಯಮ ಕ್ರಮಾಂಕದಲ್ಲಿ ಕುಶಾಲ ಮೆಂಡೀಸ್​ (30), ಧನಂಜಯ ಡಿ ಸಿಲ್ವಾ (16) ರನ್​ ಗಳಿಸಿದರು.

ಆಸ್ಟ್ರೇಲಿಯಾ ಬೌಲರ್​ಗಳಾದ ಮಿಚೆಲ್​ ಸ್ಟ್ರಾಕ್​ 4, ಕೇನ್​ ರಿಚರ್ಡ್ಸ್​ಸನ್​ 3, ಪ್ಯಾಟ್​ ಕಮ್ಮಿನ್ಸ್​ 2, ಜಾನ್ಸನ್​ ಬೆಂಡ್ರಾಫ್​ 1 ವಿಕೆಟ್​ ಪಡೆದು ಶ್ರೀಲಂಕಾ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

ಇದಕ್ಕೂ ಮುನ್ನ ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್​ (26) ಸ್ಟೀವನ್​ ಸ್ಮಿತ್​ (73), ಗ್ಲೇನ್​ ಮ್ಯಾಕ್ಸ್​ವೆಲ್​ (46*) ರನ್​ ಗಳಿಸಿ ತಂಡ ಬೃಹತ್​ ಮೊತ್ತ ದಾಖಲಿಸುವಲ್ಲಿ ಸಹಕಾರಿಯಾದರು.

ಶ್ರೀಲಂಕಾ ಪರ ಇಸುರು ಉದಾನ 2, ಧನಂಜಯಾ ಡಿ ಸಿಲ್ವಾ 2, ಲಸಿತ್​ ಮಾಲಿಂಗಾ 1 ವಿಕೆಟ್​ ಪಡೆದರಾದರೂ ಆಸ್ಟ್ರೇಲಿಯಾ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ವಿಫಲರಾದರು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.