ಬರ್ವಿುಂಗ್​ಹ್ಯಾಂ: ಈಗಾಗಲೇ ಮೊದಲ ಸೆಮಿಫೈನಲ್ಸ್ ನಲ್ಲಿ ನ್ಯೂಜಿಲೆಂಡ್ ಭಾರತದ ಎದುರು ಗೆದ್ದು ಫೈನಲ್ ಪ್ರವೇಶಿಸಿದ್ದು ಇಂದು ಎರಡನೇ ಸೆಮಿಫೈನಲ್ಸ್ ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಎದುರುಗೊಳ್ಳಲಿದೆ.

27 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿನ ಕನಸಿನಲ್ಲಿರುವ ಆತಿಥೇಯ ಇಂಗ್ಲೆಂಡ್ ತಂಡ ತವರು ನೆಲದಲ್ಲಿ ಟ್ರೋಫಿ ಎತ್ತಿ ಹಿಡಿಯಲು ಇನ್ನು ಎರಡು ಹೆಜ್ಜೆಗಳಷ್ಟೇ ದೂರ ನಿಂತಿದೆ. ಎಜ್​ಬಾಸ್ಟನ್ ಮೈದಾನದಲ್ಲಿ ಗುರುವಾರ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಕದನದಲ್ಲಿ ಮೂರು ಬಾರಿಯ ರನ್ನರ್​ಅಪ್ ಇಂಗ್ಲೆಂಡ್ ಹಾಗೂ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು ಎದುರಾಗಲಿವೆ.

3 ಬಾರಿ ಫೈನಲ್​ಗೇರಿದರೂ ಪ್ರಶಸ್ತಿ ಜಯಿಸಲು ವಿಫಲವಾಗಿರುವ ಇಂಗ್ಲೆಂಡ್ ತಂಡ ಈ ಬಾರಿ ತವರು ನೆಲದಲ್ಲೇ ಶತಾಯಗತಾಯ ಟ್ರೋಫಿ ಗೆಲುವಿನ ಛಲದಲ್ಲಿದೆ. ಮತ್ತೊಂದೆಡೆ, 12 ತಿಂಗಳ ಹಿಂದೆಯಷ್ಟೇ ಚೆಂಡು ವಿರೂಪ ಪ್ರಕರಣದಲ್ಲಿ ಡೇವಿಡ್ ವಾರ್ನರ್-ಸ್ಟೀವನ್ ಸ್ಮಿತ್ ಸಿಲುಕಿದ ಪರಿಣಾಮ ಇಡೀ ತಂಡದಲ್ಲೇ ಮಂಕು ಆವರಿಸಿತ್ತು. ಶಿಕ್ಷೆ ಅನುಭವಿಸಿ ತಂಡಕ್ಕೆ ವಾಪಸಾದ ಬಳಿಕ ಡೇವಿಡ್ ವಾರ್ನರ್ ಭರ್ಜರಿ ಫಾರ್ಮ್ ನಲ್ಲಿರುವುದು ಆಸೀಸ್ ಆತ್ಮವಿಶ್ವಾಸ ಹೆಚ್ಚಿಸಿದೆ. ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಎದುರು ಆಡಿದ ಕಡೇ 12 ಮುಖಾಮುಖಿಯಲ್ಲಿ 10ರಲ್ಲಿ ಜಯ ದಾಖಲಿಸಿದ್ದು, ಗೆಲುವಿನ ನಾಗಾಲೋಟ ಮುಂದುವರಿಸಲು ಇರಾದೆಯಲ್ಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.