ಉಡುಪಿ: ಮಲ್ಪೆ ವಂಡಾಬಾಂಡೇಶ್ವರ ವಾರ್ಡ್ ನ ಬಿಜೆಪಿ ನಗರಸಭಾ ಸದಸ್ಯ ಯೋಗಿಶ್ ಎನ್ನುವಾತ ಆರೋಗ್ಯ ಅಧಿಕಾರಿ ಪ್ರಸನ್ನ ಕುಮಾರ್ ಮೇಲೆ ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದ ಪ್ರಸನ್ನ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಯೋಗೀಶ್ ಇಂದು ಆರೋಗ್ಯ ನಿರೀಕ್ಷಕರ ಕಚೇರಿಗೆ ಆಗಮಿಸಿ ವಾರ್ಡ್‌ನ ಕಲ್ಲು ತೆಗೆಯುವ ವಿಚಾರಕ್ಕೆ ಸಂಬಂಧಿಸಿ ಏಕವಚನದಲ್ಲಿ ನಿಂದಿಸಿದ್ದಲ್ಲದೆ, ಕಣ್ಣಿನ ಭಾಗ ಹಲ್ಲೆ ನಡೆಸಿರುವುದಾಗಿ ಪ್ರಸನ್ನ ಕುಮಾರ್ ದೂರಿದ್ದಾರೆ. ಈ ಸಂಬಂಧ ಪ್ರಸನ್ನ ಕುಮಾರ್ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸ್ಥಳಕ್ಕೆ ಉಡುಪಿ ನಗರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ನಗರಸಭೆಯ ಅಧಿಕಾರಿಗಳು ಸ್ಥಳದಲ್ಲಿ ಭೇಟಿನೀಡಿದ್ದಾರೆ.ಹಲ್ಲೆಯ ಹಿನ್ನಲೆಯಲ್ಲಿ ನಗರಸಭೆ ‌ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ.ನಗರಸಭೆಯಲ್ಲಿ ಇಂದಿನ ಕಚೇರಿಯ ಕೆಲಸಗಳನ್ನು ನಿಲ್ಲಿಸಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.