ಉಡುಪಿ : ನಾಳೆ ಅಶೀರನ ಕವನಗಳು ಪುಸ್ತಕ ಬಿಡುಗಡೆ

204

ಉಡುಪಿ : ಸಂವೇದನ ಫಾರಂ ಫಾರ್ ಆರ್ಟ್, ಕಲ್ಚರ್ ಆ್ಯಂಡ್ ಲಿಟ್ರೇಚರ್ ಬೆಂಗಳೂರು ಇದರ ವತಿಯಿಂದ ಉದಯೋನ್ಮುಕ ಕವಿ ಎಂ ಆಶೀರುದ್ದೀನ್ ಮಂಜನಾಡಿರವರ ಚೊಚ್ಚಲ ಕವನ ಸಂಕಲನ “ಆಶೀರನ ಕವನಗಳು” ಶನಿವಾರ ಸಂಜೆ 5-30 ಕ್ಕೆ ಉಡುಪಿಯ ದುರ್ಗಾ ಇಂಟರ್ ನ್ಯಾಶನಲ್ ಹಾಲ್ ನಲ್ಲಿ ಬಿಡುಗಡೆ ಸಮಾರಂಭ ನಡೆಯಲಿದೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂವೇದನ ಫಾರಂ ಫಾರ್ ಆರ್ಟ್, ಕಲ್ಚರ್ ಆ್ಯಂಡ್ ಲಿಟ್ರೇಚರ್ ಇದರ ಅಧ್ಯಕ್ಷರಾದ ಕಿದಿಯೂರು ನಿಹಾಲ್ ಸಾಹೇಬ್ ವಹಿಸಲಿದ್ದಾರೆ. ಕವನ ಸಂಕಲನವನ್ನು ಮಂಗಳೂರಿನ ಖ್ಯಾತ ವೈದ್ಯರು ಮತ್ತು ಬರಹಗಾರರು ಆದ ಡಾ. ಸುರೇಶ್ ನೆಗಳಗುಳಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸೌರಭ ಪ್ರಕಾಶನದ ನಿರ್ದೇಶಕರು ಕವಿಗಳು ಆದ ಜಿ ಎಂ ಶರೀಫ್ ಹೂಡೆ ಆಗಮಿಸಲಿದ್ದಾರೆ.

ಕವಿ ಪರಿಚಯ : 1990 ಎಸ್ ಎಂ ಇಸ್ಮಾಯಿಲ್ ಮತ್ತು ಹಾಜಿರ ದಂಪತಿಗಳ ಹಿರಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮದ ಸಾರ್ತಬೈಲ್ ಎಂಬ ಊರಿನಲ್ಲಿ ಹುಟ್ಟಿದರು. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಜನಾಡಿಯಲ್ಲಿ, ಸರಕಾರಿ ಪ್ರೌಢಶಾಲೆ ಮಂಟೆಪದವಿನಲ್ಲಿ ಹೈಸ್ಕೂಲ್ ವಿಧ್ಯಾಭ್ಯಸಾವನ್ನು ಮುಗಿಸಿದರು. ನಂತರದಲ್ಲಿ ಕಾಸರಗೋಡಿನ ಆಲಿಯಾ ಇಂಟರ್ ನ್ಯಾಷನಲ್ ಅಕಾಡಮಿಗೆ ಸೇರಿದ ಅವರು ತನ್ನ ಪದವಿ ಶಿಕ್ಷಣವನ್ನು ಪೂರೈಸಿಕೊಂಡರು. ಪ್ರಸ್ತುತ ಸ್ನೇಹ ಪಬ್ಲಿಕ್ ಸ್ಕೂಲ್ ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಸ್ಲೀಮ್ ಲೇಖಕರ ಸಂಘ, ಕೋಮು ಸೌಹಾರ್ದ ವೇದಿಕೆ, ಎಸ್ ಐ ಓ, ಮೇಲ್ತನೆ ಬ್ಯಾರಿ ಸಂಘ ಇನ್ನೀತರ ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇಂಕ್ ಡಬ್ಬಿ,ಕಾಂ ಇದರ ಉಪ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಯುವ ಕವಿ ಆಶೀರ್ ರವರ ಕವನ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟಿತಗೊಂಡಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.