ಲೇಖಕರು: ಡಾ.ಪಿ.ವಿ ಭಂಡಾರಿ

ನಾನು ಮನೋವೈದ್ಯಕೀಯ ವಿದ್ಯಾರ್ಥಿಯಾಗಿದ್ದಗಿಲಿಂದಲೂ ಜನಸಾಮಾನ್ಯರು ನನಗೆ ಕೇಳುವ ಪ್ರಶ್ನೆ ಇದು .ಅಮವಾಸ್ಯೆ ,ಹುಣ್ಣಿಮೆಗೆ ಮನುಷ್ಯನ ಮನಸ್ಸಿನಲ್ಲಿ ಬದಲಾವಣೆಗಳಾಗುತ್ತದೆ ಹೌದಾ? ಒಬ್ಬ ಮನೋವೈದ್ಯಕೀಯ ವಿದ್ಯಾರ್ಥಿಯಾಗಿ ನನ್ನ ಉತ್ತರ ಏನೆಂದರೆ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಖಂಡಿತ ಇಲ್ಲ ..ಆದರೆ ಈ ಬಗ್ಗೆ ಹಲವು ವೈಜ್ಞಾನಿಕ ಸಂಶೋಧನೆಗಳು ಇನ್ನೂ ಕೂಡ ನಡೆಯುತ್ತಲೇ ಇವೆ ..ಇಂಗ್ಲಿಷ್ ಭಾಷೆಯಲ್ಲಿ lunacy ಅಂದರೆ” ಹುಚ್ಚು “ಎಂಬ ಶಬ್ದ lunar ಅಂದರೆ ಚಂದ್ರನಿಗೆ ಸಂಬಂಧಪಟ್ಟ ಹಾಗೂ ಗ್ರೀಕ್ ದೇವತೆಗಳಲ್ಲಿ ಚಂದ್ರನ ಅಧಿದೇವತೆಯಾದ” ಲೂನಾ “ಗೆ ಸಂಬಂಧಪಟ್ಟದ್ದು ಅಂತ ಹೇಳಲಾಗುತ್ತದೆ. ಹಾಗೆಯೇ ಆಧುನಿಕ ವೈದ್ಯಕೀಯ ವಿಜ್ಞಾನದ ಪಿತಾಮಹಾ ಹಿಪ್ಪೊಕ್ರೇಟ್ಸ ಪ್ರತಿಯೊಬ್ಬ ವೈದ್ಯನು ಜ್ಯೋತಿಷ್ಯ ಶಾಸ್ತ್ರವನ್ನು ತಿಳಿದುಕೊಂಡಿರಬೇಕು ಎಂಬ ಒಂದು ವಿಚಾರವನ್ನು ಹೇಳಿದ್ದರಂತೆ.ಇದನ್ನು ಓದಿ ಹಲವಾರು ಜನರಿಗೆ ಖುಷಿಯಾಗಬಹುದು ಹಾಗೂ ವಿಜ್ಞಾನದ ಮತ್ತು ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಒಂದು ದೊಡ್ಡ ಪುರಾವೆ ಸಿಕ್ಕಂತೆ ಅನ್ನಿಸಬಹುದು.

ಆದರೆ ಆಧುನಿಕ ವೈದ್ಯಕೀಯ ವಿಜ್ಞಾನವೂ ಬೆಳೆದು ಬಂದ ಹಾಗೆ ಹಿಪ್ಪೊಕ್ರೇಟ್ಸ್ ಕ್ರೇಟ್ಸ್ ನ ಈ ಮಾತಿಗೆ ಅಷ್ಟು ಸರಿ ಹೊಂದುವ ಯಾವುದೇ ಪುರಾವೆಗಳು ಇಲ್ಲ. ಆದರೂ ಕೂಡ ಬಹಳಷ್ಟು ಜನ ಇವತ್ತಿಗೂ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಮಾನಸಿಕ ಸಮಸ್ಯೆಗಳಲ್ಲಿ ಏರು ಪೇರು ಕಾಣುತ್ತದೆ ಎಂದು ಹೇಳುತ್ತಾರೆ.ಇದಕ್ಕೆ ಹಲವಾರು ವೈಜ್ಞಾನಿಕ ಪುರಾವೆಗಳನ್ನು ತಿಳಿಸುತ್ತಾರೆ.ಸಮುದ್ರದ ಅಲೆಗಳು ಅಮಾವಾಸ್ಯೆ ಹುಣ್ಣಿಮೆಯ ಸಂದರ್ಭದಲ್ಲಿ ಏರು ತಗ್ಗುಗಳನ್ನು ಕಂಡ ಹಾಗೆ. ಮನುಷ್ಯನ ದೇಹದಲ್ಲಿ ದ್ರವ್ಯ ಅಂಶವೇ ಜಾಸ್ತಿ ಇರುವಾಗ ಸಮುದ್ರದ ನೀರಿನಂತೆ ಮನುಷ್ಯನ ದೇಹದಲ್ಲಿ ಕೂಡ ಹಲವಾರು ಬದಲಾವಣೆಗಳು ಆಗುತ್ತವೆ. ಅದರಲ್ಲೂ ಮನುಷ್ಯನ ಮೆದುಳಿನಲ್ಲಿ ನೀರಿನ ಅಂಶ ದ್ರವ್ಯ ಅಂಶ ಬಹಳ ಇರುವುದರಿಂದ ಇದು ಖಂಡಿತವಾಗಿಯೂ ಚಂದ್ರನ ಒಂದು ಆಕರ್ಷಣೆಗೆ ಒಳಗಾಗುತ್ತದೆ.

ಹಲವು ರಕ್ತ ಹೀರುವ ಪ್ರೇತ ಶಕ್ತಿಗಳು(vampires) ,ತೋಳಗಳು(wolves) ಅಮಾವಾಸ್ಯೆ ಹುಣ್ಣಿಮೆಯ ದಿನ ವಿಚಿತ್ರವಾಗಿ ವರ್ತಿಸುತ್ತವೆ.ಇದರಿಂದಾಗಿ ಖಂಡಿತವಾಗಿ ಮನುಷ್ಯನ ಮಾನಸಿಕ ಸಮಸ್ಯೆಗಳು ಅಮವಾಸ್ಯೆ ಹುಣ್ಣಿಮೆಗೆ ಉಲ್ಬಣಗೊಳ್ಳುತ್ತವೆ ಎಂಬುದು ಜನಸಾಮಾನ್ಯರ ಮನಸ್ಸಿನಲ್ಲಿ ಇರುವ ವಿಷಯ. ನಿಜವಾಗಿ ನೋಡಿದರೆ ವೈಜ್ಞಾನಿಕ ಸಂಶೋಧನೆಗಳು ಇವ್ಯಾವುದಕ್ಕೂ ಪುರಾವೆಗಳನ್ನು ನೀಡುತ್ತಿಲ್ಲ ..ಮನುಷ್ಯನ ನಡವಳಿಕೆಗೂ ಗ್ರಹಗಳಿಗೂ ಅಥವಾ ಚಂದ್ರನಿಗೂ ಯಾವುದೇ ಸಂಬಂಧವನ್ನು ಯಾವುದೇ ವೈಜ್ಞಾನಿಕ ಸಂಶೋಧನೆಯು ತಿಳಿಸುತ್ತಿಲ್ಲ.

ಆದ್ದರಿಂದ ಮೊದಮೊದಲು ವೈದ್ಯಕೀಯ ವಿಜ್ಞಾನ ಈ ಪುರಾವೆಗಳ ಬಗ್ಗೆ ಸ್ವಲ್ಪ ಮಟ್ಟಿಗೆ ನಂಬಿದ್ದರೂ ಬರಬರುತ್ತಾ ಈ ನಂಬಿಕೆಗಳನ್ನು ಒಪ್ಪುತ್ತಿಲ್ಲ ಇದು ಜನ ಸಾಮಾನ್ಯರು ತಿಳಿದಿರಲಿ ಅಂತ. ಇಷ್ಟೆಲ್ಲ ಬರೆಯಲು ಕಾರಣವೇನೆಂದರೆ ರೋಗಿಯೊಬ್ಬರು ನನಗೆ ಫೋನ್ ಮಾಡಿದ್ದರು.ಅವರಿಗೆ ಚಂದ್ರಗ್ರಹದ ಏನೋ ದೋಷವಿದೆಯಂತೆ ಆದ್ದರಿಂದ ಆದರ ಪರಿಹಾರವಾಗಿದೆ. ಮಾತ್ರೆ ನಿಲ್ಲಿಸಬಹುದೇ ಎಂದು ಪ್ರಶ್ನೆಯನ್ನೂ ಕೇಳಿದರು ಹಾಗಾಗಿ ಈ ವಿಷಯ ಬಸ್ಸಿನಲ್ಲಿರುವಾಗ ಮನಸ್ಸಿಗೆ ಬಂತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.