ಶ್ರೀನಗರ: 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಅಲ್ಲಿ ಹಿಂಸೆ ಸಂಭವಿಸಬಹುದು ಎಂಬ ಭಯದಿಂದ 4 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ರಾಜ್ಯದ ಜೈಲುಗಳಲ್ಲಿ ಬಂಧಿತರನ್ನು ಇಡಲು ಸ್ಥಳವಿಲ್ಲದ ಕಾರಣ ಕೆಲವರನ್ನು ಹೊರರಾಜ್ಯಕ್ಕೆ ರವಾನಿಸಲಾಗಿದೆ ಎಂದು ನ್ಯಾಯಾಧೀಶರೊಬ್ಬರು ಹೇಳಿದ್ದಾರೆ. 4 ಸಾವಿರ ಜನರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್‌ಎ)ಯಡಿ ಬಂಧಿಸಲಾಗಿದೆ ಎಂದವರು ಹೇಳಿದ್ದಾರೆ.

ವ್ಯಕ್ತಿಯೊಬ್ಬನನ್ನು ಯಾವುದೇ ಆರೋಪ ಹೊರಿಸದೆ ಅಥವಾ ವಿಚಾರಣೆ ನಡೆಸದೆ ಎರಡು ವರ್ಷ ಬಂಧನದಲ್ಲಿಡಲು ಈ ವಿವಾದಾತ್ಮಕ ಕಾಯ್ದೆ ಅವಕಾಶ ನೀಡುತ್ತದೆ. ರಾಜ್ಯದಲ್ಲಿ ಸಂಪರ್ಕ ವ್ಯವಸ್ಥೆ ಸ್ಥಗಿತಗೊಳಿಸಿದ್ದರೂ ಈ ಹಿಂದೆ ತನಗೆ ನೀಡಲಾಗಿದ್ದ ಸ್ಯಾಟ್ ಲೈಟ್ ಫೋನ್‌ನಿಂದಾಗಿ ಸಹೋದ್ಯೋಗಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಸಾಧ್ಯವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.