ಮಂಜುನಾಥ ಕೆ.ವಿ.

ಹಿಂದಿ. ಉಪನ್ಯಾಸಕರು. ಜೆ.ಸಿ.ಬಿ. ಎಂ. ಕಾಲೇಜು. ಶೃಂಗೇರಿ.

ಸಂಕ್ರಾಂತಿ ಹಿಂದೂಗಳ ಪ್ರಮುಖ ಹಬ್ಬ ಈ ಹಬ್ಬವನ್ನು ಪ್ರತಿ ವರ್ಷ ಜನವರಿ ಹದಿನಾಲ್ಕು ಇಲ್ಲವೆ ಹದಿನೈದರಂದು ಭಾರತದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಸೂರ್ಯನು ಧನುರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸುವ ಸಕಾಲ ಇದು. ಅಂದರೆ ಇಂದಿನಿಂದ ಸೂರ್ಯನ ಉತ್ತರಾಯಣ ಗತಿ ಆರಂಭವಾಗುತ್ತದೆ. ಸಾಮಾನ್ಯವಾಗಿ ಸೂರ್ಯನು ಎಲ್ಲಾ ರಾಶಿಯ ಮೇಲೆ ತನ್ನ ಪ್ರಭಾವವನ್ನು ಬೀರುತ್ತಾನೆ ಆದರೆ, ಮಕರ ರಾಶಿಯ ಮೇಲೆ ಬೀರುವ ತನ್ನ ಪ್ರಭಾವವು ಹಿಂದೂ ಧಾರ್ಮಿಕ ದೃಷ್ಟಿಯಲ್ಲಿ ಹೆಚ್ಚು ಫಲದಾಯಕವಾಗಿರುತ್ತದೆ.

ಶಾಸ್ತ್ರಗಳಲ್ಲಿ ಧಕ್ಷಿಣಾಯಣವು ದೇವತೆಗಳ ರಾತ್ರಿ ಎಂದೂ, ಉತ್ತರಾಯಣವನ್ನು ದೇವತೆಗಳ ದಿನವೆಂದು ಕರೆಯಲಾಗಿದೆ. ಭಾರತ ದೇಶವು ಉತ್ತರಾರ್ಧ ಗೋಳದಲ್ಲಿದ್ದು, ಮಕರ ಸಂಕ್ರಾಂತಿಯ ಮೊದಲ ಸೂರ್ಯ ದಕ್ಷಿಣ ಗೋಳಾರ್ಧದಲ್ಲಿ ಇರುತ್ತಾನೆ. ಅಂದರೆ ಅಪೇಕ್ಷಾಕೃತ ಭಾರತದಿಂದ ಬಹಳ ದೂರದಲ್ಲಿದ್ದು, ರಾತ್ರಿ ಹೆಚ್ಚು ಹಗಲು ಕಡಿಮೆ ಆಗಲು ಕಾರಣನಾಗಿರುತ್ತಾನೆ. ಮಕರ ಸಂಕ್ರಾಂತಿ ದಿನದಂದ ಸೂರ್ಯನ ಪ್ರವೇಶವು ಉತ್ತರಾರ್ಧಗೋಳದ ಕಡೆಯಾಗುವುದರಿಂದ ಈ ಭಾಗಗಳಲ್ಲಿ ಹಗಲು ಹೆಚ್ಚು ರಾತ್ರಿ ಕಡೆಮೆಯಾಗಲಿದೆ. ಸೂರ್ಯನು ಮಕರ ಸಂಕ್ರಾಂತಿ ದಿನದಂದು ಮಾಡುವ ತನ್ನ ರಾಶಿ ಪರಿವರ್ತನೆಯನ್ನು ಹಿಂದೂ ಧರ್ಮದಲ್ಲಿ ಕತ್ತಲೆಯಿಂದ ಬೆಳಕಿನಕಡೆಗೆ ಸಕಲ ಜೀವ ಸಂಕುಲಗಳನ್ನು ಕರೆದೊಯ್ಯುವುದು ಎನ್ನುವ ಮನೋ ಕಲ್ಪನೆಯಲ್ಲಿ ಮಕರ ಸಂಕ್ರಾಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.

ಮಕರ ಸಂಕ್ರಾಂತಿಯ ಹಿಂದೆಯೂ ಬಹಳಷ್ಟು ಇತಿಹಾಸ ಪುರಾಣ ಕಥೆಗಳಿವೆ. ಮಕರ ಸಂಕ್ರಾಂತಿಯ ದಿನದಂದು ಮಕರ ರಾಶಿಯ ಸ್ವಾಮಿ ಆದಂತಹ ಶನಿಯನ್ನು ಬೇಟಿಯಾಗಲು ಆತನ ತಂದೆ ಸೂರ್ಯ ದೇವನು ಬರುವನೆಂಬ ನಂಬಿಕೆ ಇದೆ.

ಇದೇ ಮಕರ ಸಂಕ್ರಾಂತಿಯ ದಿನದಂದೇ ಮಹಭಾರತದ ಬೀಷ್ಮ ತನ್ನ ದೇಹ ತ್ಯಾಗ ಮಾಡಲು ಸುಧಿನ ಎಂದು ಕಾದು ಕುಳಿತು ತನ್ನ ದೇಹ ತ್ಯಾಗ ಮಾಡಿದನಂತೆ.

ಗಂಗಾಳನ್ನು ಭೂಮಿಗೆ ತಂದಂತಹ ಭಗೀರಥನು ತನ್ನ ಪೂರ್ವಜರಿಗೆ ತರ್ಪಣವನ್ನು ಇದೇ ಮಕರ ಸಂಕ್ರಾಂತಿಯ ದಿನದಂದು ನೀಡಿದನಂತೆ. ಅವನ ತರ್ಪಣ ಸ್ವೀಕರಿಸಿದ ನಂತರ ಗಾಂಗ ಸಮುದ್ರ ಸೇರಿದಳಂತೆ ಎಂಬ ಪ್ರತೀತಿ ಇದೆ. ಅಂದಿನಿಂದ ಮಕರ ಸಂಕ್ರಾಂತಿಯ ದಿನದಂದು ಗಂಗಾ ನದಿಯ ತಟದಲ್ಲಿ ಜಾತ್ರೆಗಳು ನಡೆಯುತ್ತವೆ.

ಇದೆ ಮಕರ ಸಂಕ್ರಾಂತಿಯ ದಿನದಂದು ವಿಷ್ಣು ದೇವನು ಎಲ್ಲಾ ಅಸುರರನ್ನು ಮಂಧಾರ ಪರ್ವತದಲ್ಲಿ ನಾಶಮಾಡಿ, ಯುದ್ದಕ್ಕೆ ಕೊನೆ ಹಾಡಿದನಂತೆ ಅಂದಿನಿಂದಲೇ ಈ ಮಕರ ಸಂಕ್ರಾಂತಿಯ ದಿನವನ್ನು ದುರ್ಗುಣಗಳು ಮತ್ತು ನಕರಾತ್ಮಕ ಚಿಂತನೆಗಳನ್ನು ದೂರಮಾಡುವ ದಿನವೆಂದು ಪರಿಗಣಿಸಲಾಗುತ್ತದೆ.

ಭಾರತ ದೇಶದಲ್ಲಿ ಈ ಮಕರ ಸಂಕ್ರಾಂತಿಯನ್ನು ವಿವಿಧ ಹೆಸರಿನಲ್ಲಿ ಆಚರಿಸಲಾಗುತ್ತದೆ. ಗುಜರಾತ್ನಲ್ಲಿ ಉತ್ತರಾಯಣ ಎಂದೂ, ಹರಿಯಾಣ, ಪಂಜಾಬ್ಗಳಲ್ಲಿ ಮಾಘೀ ಎಂದೂ, ಅಸ್ಸಾಂನಲ್ಲಿ ಭೋಗಲಿ ಬಿಹೂ ಎಂದೂ, ಉತ್ತರ ಪ್ರದೇಶದಲ್ಲಿ ಖಿಚಢೀ ಎಂದೂ, ತಮಿಳುನಾಡಿನಲ್ಲಿ ಪೊಂಗಲ್ ಎಂದೂ, ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದು ಈ ಮಕರ ಸಂಕ್ರಾಮತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಧಾನ ಮಾಡಿದ ವಸ್ತುಗಳು ಭವಿಷ್ಯದಲ್ಲಿ ದುಪ್ಪಟ್ಟಾಗುತ್ತವೆ ಎಂಬ ನಂಬಿಕೆಯೂ ಇದೆ. ಸಾಮಾನ್ಯವಾಗಿ ಹಿಂದೂ ಧರ್ಮದವರಲ್ಲಿ ಪರಸ್ಪರ ಎಳ್ಳು ಬೆಲ್ಲವನ್ನು ಹಂಚುವ ಮೂಲಕ ಹಳೆಯ ಕಹಿ ನೆನಪುಗಳೆನ್ನೆಲ್ಲಾ ಮರೆತು ಸಿಹಿ ನುಡಿಗಳನ್ನಾಡುತ್ತಾ ಹೊಸ ಬದುಕಿಗೆ ಮುನ್ನುಡಿ ಬರೆಯುವ ಅಭಿಲಾಷೆ ಈ ಮಕರ ಸಂಕ್ರಾಂತಿಯ ದಿನದ್ದಾಗಿರುತ್ತದೆ…

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.