ಶಿವಮೊಗ್ಗ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಿವಮೊಗ್ಗ ವಿಭಾಗದ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ, ಭದ್ರಾವತಿ, ಸಾಗರ, ಹೊನ್ನಾಳಿ ಘಟಕಗಳು ವಿಭಾಗೀಯ ಕಾರ್ಯಾಗಾರ, ವಿಭಾಗೀಯ ಉಗ್ರಾಣ ಶಾಖೆ, ವಿಭಾಗೀಯ ಕಚೇರಿಯಲ್ಲಿ ಖಾಲಿ ಇರುವ ಸ್ಥಾನಗಳಿಗೆ ಶಿಶಿಕ್ಷು ತರಬೇತಿಗಾರರ ನೇಮಕಾತಿಗಾಗಿ ವಿವಿಧ ವೃತ್ತಿಗಳಲ್ಲಿ ಐ.ಟಿ.ಐ ಪಾಸಾಗಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹರು ತಮ್ಮ ಅಗತ್ಯ ದಾಖಲಾತಿಗಳೊಂದಿಗೆ ಫೆಬ್ರವರಿ ೨೭ರಂದು ಬೆಳಿಗ್ಗೆ ೮ರಿಂದ ಮಧ್ಯಾಹ್ನ ೨.೩೦ರವರೆಗೆ ನಡೆಯುವ ಸಂದರ್ಶನದಲ್ಲಿ ನೇರವಾಗಿ ಭಾಗವಹಿಸಬಹುದಾಗಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-266664, ಮೊ.7625078553, 9663509972, 9901145374 ನ್ನು ಸಂಪರ್ಕಿಸಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕ.ರಾ.ರ.ಸಾ.ನಿಗಮ, ಶಿವಮೊಗ್ಗ ವಿಭಾಗ, ಪೊಲೀಸ್ ಚೌಕಿ, ವಿನೋಬ ನಗರ, ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.