ಸ್ಮಾರ್ಟ್ ಫೋನ್ ಬಳಕೆದಾರರೇ ಹುಷಾರ್ ಈ ಆಯಪ್ ಗಳನ್ನು `ಡೌನ್ ಲೋಡ್’ ಮಾಡುವ ಮುನ್ನ ಇರಲಿ ಎಚ್ಚರ

426

ನ್ಯೂಸ್ ಡೆಸ್ಕ್ : ಸ್ಮಾರ್ಟ್ ಫೋನ್ ಬಳಕೆದಾರರೇ ಸ್ವಲ್ಪ ಎಚ್ಚರದಿಂದಿರಿ ಪ್ಲೇ ಸ್ಟೋರ್ನಲ್ಲಿ ಅನೇಕ ಕ್ರಿಮಿನಲ್ ಆಪ್ ಗಳು ಅಡಗಿಕೊಂಡಿವೆ.ಅದನ್ನು ಡೌನ್ಲೋಡ್ ಮಾಡುವ ಮುನ್ನ ಎಚ್ಚರ ವಹಿಸಿ ಎಂಬ ಶಾಕಿಂಗ್ ಮಾಹಿತಿ ಯೊಂದು ಈಗ ಲಭಿಸಿದೆ.

ಪ್ಲೇ ಸ್ಟೋರ್ ನಲ್ಲಿ ಈಗ ನಕಲಿ ಹೆಸರಿನಲ್ಲಿ ಕೆಲವು ಆಪ್ ಗಳು ಸೇರಿಕೊಂಡಿವೆ.ಇದು ಡೌನ್ಲೋಡ್ ಮಾಡಿಕೊಳ್ಳುವವರಿಗೆ ತೀರಾ ಅಪಾಯಕಾರಿಯಾಗಲಿದೆ.ಆಪ್ ಡೌನ್ಲೋಡ್ ಮಾಡಿಕೊಂಡ ತಕ್ಷಣ ಹ್ಯಾಕರ್ ಗಳು ನಿಮ್ಮ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ ಅಲ್ಲದೆ ನಿಮ್ಮ ಮೊಬೈಲ್ನಲ್ಲಿದ್ದ ನಿಮ್ಮ ಫೋಟೋಸ್ ಗಳನ್ನು ಕದಿಯುತ್ತಾರೆ.ಅಲ್ಲದೆ ಬ್ಯಾಂಕ್ ಆಪ್ ನಿಮ್ಮ ಮೊಬೈಲ್ ನಲ್ಲಿ ಇದ್ದರೆ ನಿಮ್ಮ ಪಾಸ್ವರ್ಡ್ ಕದ್ದು ತಕ್ಷಣ ಹಣವನ್ನು ಅವರ ಅಕೌಂಟ್ ಗೆ ವರ್ಗಾವಣೆ ಮಾಡುತ್ತಾರೆ.ಎಂದು ಡಾಕ್ಟರ್ ವೆಬ್ ವರದಿ ಹೇಳಿದೆ.

ಕ್ರಿಕೆಟ್ ಮಝಾ ಲೈವ್ ಲೈನ್, ಇಂಗ್ಲಿಷ್ ಉರ್ದು ಡಿಕ್ಷನರಿ ಆಫ್ ಲೈನ್- ಅರ್ನ್ ಇಂಗ್ಲಿಷ್ ಜಿಪಿಎಸ್ ಫಿಕ್ಸ್, ಕ್ಯೂ ಆರ್ ಕೋಡ್ ರೀಡರ್,ಎಐ ಟೈಪ್ ಫ್ರೀ ಇಮೋಜಿ ಕೀಬೋರ್ಡ್,
ನೋಟ್ ಪ್ಯಾಡ್ ಟೆಕ್ಸ್ಟ್ ಎಡಿಟರ್, ನೋಟ್ ಪ್ಯಾಡ್ ಟೆಕ್ಸ್ಟ್ ಎಡಿಟರ್ ಪ್ರೊ, ಡೋಮೀಟರ್ ಸ್ಟೆಪ್ ಕೌಂಟರ್-ಫಿಟ್ನೆಸ್ ಟ್ರ್ಯಾಕ್ಟರ್, ಪಿಡಿಎಫ್ ವ್ಯೂವರ್-ಇಬುಕ್ ರೀಡರ್, ಜಿಪಿಎಸ್ ಸ್ಟಿಡೋಮೀಟರ್ ಹೀಗೆ ಅನೇಕ ಆಪ್ ಗಳು ಅಪಾಯಕಾರಿಯಾಗಿವೆ.ಕೂಡಲೇ ಯಾರಾದರೂ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ ಡಿಲೀಟ್ ಮಾಡಿ ಎಂದು ಡಾಕ್ಟರ್ ವೆಬ್ ಸೂಚನೆ ನೀಡಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.