ಕರಾವಳಿ ದೊಡ್ಡಣ್ಡಗುಡ್ಡೆ ವಿವಾದ: ನೈಜ್ಯ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ ಅನ್ಸಾರ್ ಅಹ್ಮದ್

ದೊಡ್ಡಣ್ಡಗುಡ್ಡೆ ವಿವಾದ: ನೈಜ್ಯ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ ಅನ್ಸಾರ್ ಅಹ್ಮದ್

-

ಜಾಹೀರಾತು

ಜಾಹೀರಾತು

ಉಡುಪಿ:ಕಳೆದ ಹತ್ತು ದಿನಗಳ ಹಿಂದೆ ನವಂಬರ್ 14 ರಂದು ಉಡುಪಿಯ ದೊಡ್ಡಣ್ಣಗುಡ್ಡೆ ಎಂಬಲ್ಲಿರುವ ವ್ಯಾಯಾಮ ಶಾಲೆಯಲ್ಲಿನ ಆಂಜನೇಯ ಭಾವಚಿತ್ರಕ್ಕೆ ಅವಮಾನಿಸಿದ ಘಟನೆಯೊಂದು ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಘಟನಾ ಸ್ಥಳದಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿರುತ್ತಾರೆ. ನಂತರ ಮಾನ್ಯ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿರುವ ಮೇರೆಗೆ ಬಿಡುಗಡೆ ಹೊಂದಿರುತ್ತಾರೆ.
ಬಂಧಿತ ಯುವಕರು ನಾವು ಘಟನೆಯಲ್ಲಿ ನಿರಪರಾಧಿಗಳು ಎಂದು ಮೊದಲಿನಿಂದಲೇ ವಾದಿಸುತ್ತಾ ಬಂದಿರುತ್ತಾರೆ.

ದರ್ಗಾ ಹಾಗೂ ದೈವ-ದೇವರ ಮೋರೆ:

ನಾವು ಈ ಪ್ರಕರಣದಲ್ಲಿ ನಿರಪರಾಧಿಯೆಂದು ಪದೇ ಪದೇ ಹೇಳಿದಾಗಲೂ ಯಾರು ಕೇಳದ ಪರಿಸ್ಥಿತಿ ಇರುವಾಗ ತೀವ್ರ ಬೇಸತ್ತ ಈ ಮೂವರು ಯುವಕರು ಮುಸ್ಲಿಮರು ನಂಬಿರುವ ದೊಡ್ಡಣಗುಡ್ಡೆ ದರ್ಗಾ ಹಾಗೂ ಹಿಂದೂಗಳು ನಂಬಿರುವ ದೊಡ್ಡಣಗುಡ್ಡೆ ಧೂಮಾವತಿ ಜುಮಾದಿ ಕಟ್ಟೆಗೆ ಭೇಟಿಕೊಟ್ಟು ನಾವು ಈ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ ಹಾಗೂ ಈ ಪ್ರಕರಣದ ನೈಜ ಆರೋಪಿಗಳಿಗೆ ನೀವೇ ಶಿಕ್ಷೆ ನೀಡಬೇಕೆಂದು ದೂರು ನೀಡಿರುತ್ತಾರೆ. ಮುಂದೆ ಹಿಂದೂಗಳು ನಂಬುವ ಅತ್ಯಂತ ಶಕ್ತಿಶಾಲಿ ದೈವವೆಂದು ಪ್ರಸಿದ್ಧಿಯಾಗಿರುವ ಕಟಪಾಡಿಯ ಕೊರಗಜ್ಜನ ಬಳಿಗೆ ದೂರು ನೀಡಲು ಯೋಚಿಸಿರುತ್ತಾರೆ.

ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದೆಂಬುವುದು ಕಾನೂನಿನ ಮೂಲ ಆಶಯವಾಗಿರುವಾಗ ಈ ಪ್ರಕರಣದ ಮೂವರು ಯುವಕರನ್ನು ಬಲಿಪಶು ಮಾಡಿರುವುದು ಎಷ್ಟು ಸರಿ???

ಈ ಪ್ರಕರಣದಲ್ಲಿ ದುರುದ್ದೇಶದಿಂದ ಕಾಣದ ಕೈಯೊಂದು ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆಂಜನೇಯ ದೇವರ ಭಾವಚಿತ್ರವನ್ನು ವಿರೂಪಗೊಳಿಸಿ ರುವುದನ್ನು ನಾವೂ ಖಂಡಿಸುತ್ತೇವೆ. ಅದರ ಬಗ್ಗೆ ನಮಗೂ ಬೇಸರವಿದೆ ಏಕೆಂದರೆ ಎಲ್ಲರ ಧಾರ್ಮಿಕ ಭಾವನೆಗಳು ಒಂದೇ ರೀತಿಯಾಗಿರುತ್ತದೆ. ಆದ್ದರಿಂದ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಪ್ರಕರಣದ ನೈಜ್ಯ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಮುಸ್ಲಿಂ ಸಮುದಾಯದ ಮುಖಂಡ ಅನ್ಸಾರ್ ಅಹ್ಮದ್ ರವರು ಆಗ್ರಹಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿರುತ್ತಾರೆ.

LEAVE A REPLY

Please enter your comment!
Please enter your name here

Latest news

ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿದ ಅಮಿತ್ ಶಾ ; ವ್ಯಾಪಕ ವಿರೋಧ

ನವದೆಹಲಿ: ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದರು. ಈ ಮಸೂದೆಯು ಸಂವಿಧಾನದ 14 ನೇ ವಿಧಿಯನ್ನು...

ಸಿದ್ಧರಾಮಯ್ಯ ಪಕ್ಷದ ಶಾಸಕಾಂಗ ನಾಯಕನ ಸ್ಥಾನಕ್ಕೆ ರಾಜೀನಾಮೆ!

ಬೆಂಗಳೂರು :ಉಪಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ...

ಹೂಡೆಯ ಸಾಲಿಹಾತ್ ಶಾಲೆ: ಉಡುಪಿ ಅಂತರ್ ಶಾಲಾ ಮಟ್ಟದ ವಿಜ್ಞಾನ ಮೇಳ

ತೋನ್ಸೆ - ಹೂಡೆಯ ಸಾಲಿಹಾತ್ ಶಾಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಎ.ಜೆ.ಅಕಾಡಮಿ ರಾಯಚೂರು ಹಾಗೂ ಸಾಲಿಹಾತ್ ಶಿಕ್ಷಣ ಸಂಸ್ಥೆ ಇವರುಗಳ ಜಂಟಿ ಆಶ್ರಯದಲ್ಲಿ ಉಡುಪಿ ಅಂತರ್ ಶಾಲಾ...

ಕೊನೆಗೂ ಗೆದ್ದ ರಿಜ್ವಾನ್ ಅರ್ಷದ್; ರೋಶನ್ ಬೇಗ್’ಗೆ ಮುಖಭಂಗ

ಬೆಂಗಳೂರು: ಈ ಬಾರಿ ಶಿವಾಜಿ ನಗರದ ಉಪ ಚುನಾವಣೆ ಬಹಳಷ್ಟು ಕುತೂಹಲ ಹುಟ್ಟಿಸಿತ್ತು. ರೋಶನ್ ಬೇಗ್ ರಿಜ್ವಾನ್ ಅರ್ಷದ್ ಅವರನ್ನು ಸೋಲಿಸುವ ಪಣ ತೊಟ್ಟಿದ್ದರು. ಇದೀಗ...
- Advertisement -

ಕಾಂಗ್ರೆಸ್ ನಾಯಕರೇ ಪಕ್ಷವನ್ನು ಕೆಳಗುರುಳಿಸಿದ್ದಾರೆ – ಜನಾರ್ದನ ಪೂಜಾರಿ

ಮಂಗಳೂರು: ಬಿಜೆಪಿಯ ಗೆಲುವಿನ ಬಗ್ಗೆ ಮೊದಲೇ ಗ್ರಹಿಸಿದ್ದೇನೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ್ ಪೂಜಾರಿ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಕರ್ನಾಟಕ ಉಪಚುನಾವಣೆ ಫಲಿತಾಂಶಗಳ ಕುರಿತು ಪತ್ರಿಕಾಗೋಷ್ಠಿಗಳನ್ನುದ್ದೇಶಿಸಿ...

ಅನರ್ಹರಿಗೆ ಜನ ಮತ; ಬಿಜೆಪಿ ಸರಕಾರ ಭದ್ರ

ಬೆಂಗಳೂರು: ಹದಿನೈದು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ನಿರ್ವಹಣೆ ನೀಡಿದ್ದು ಹನ್ನೆರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಕೇವಲ ಎರಡು ಕ್ಷೇತ್ರಗಳಲ್ಲಿ ಗೆಲುವು...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...
- Advertisement -

You might also likeRELATED
Recommended to you