ಬೆಂಗಳೂರು: ಅಣ್ಣಾ ಮಲೈ ಆರ್.ಎಸ್.ಎಸ್ ಸೇರುತ್ತಾರೆಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲಾತಾಣದಲ್ಲಿ ವೈರಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಐ.ಪಿ.ಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅಣ್ಣಾಮಲೈ, ಆರ್.ಎಸ್.ಎಸ್ ಸೇರುವ ವದಂತಿ ಸುಳ್ಳು ಎಂದು ಸ್ಪಷ್ಟ ಪಡಿಸಿದ್ದಾರೆ.

ಸರಕಾರ ಇನ್ನು ಕೂಡ ನನ್ನ ರಾಜೀನಾಮೆ ಅಂಗೀಕಾರ ಮಾಡಿಲ್ಲ. ಸರಕಾರದ ಭಾಗವಾಗಿ ಮುಂದುವರಿಯುತ್ತಿದ್ದೇನೆ. ಆದರೆ ಸಕ್ರಿಯವಾಗಿ ಸರಕಾರದ ಭಾಗವಾಗಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ನಾನು ನನ್ನ ಸಮಯವನ್ನು ಪ್ರಯಾಣ, ಜನರನ್ನು ಭೇಟಿಯಾಗುವುದರಲ್ಲಿ ಕಳೆಯುತ್ತಿದ್ದು ಇದು ನನ್ನ ಜ್ಞಾನ ಮತ್ತು ನಂಬಿಕೆಗಳ ವ್ಯಾಪ್ತಿಯನ್ನು ಹೆಚ್ಚಿಸಲು ಭಾರತದ ಎಲ್ಲಾ ಪ್ರಮುಖ ಧರ್ಮಗಳ ಧಾರ್ಮಿಕ ಮುಖ್ಯಸ್ಥರನ್ನು ಭೇಟಿಯಾಗುವುದನ್ನು ಇದು ಒಳಗೊಂಡಿದೆ. ಹಾಗೆಂದ ಮೇಲೆ ನಾನು ಒಂದು ನಿರ್ದಿಷ್ಟ ಧರ್ಮಕ್ಕಾಗಿ ನಿಲ್ಲುತ್ತೇನೆ ಮತ್ತು ಇತರರಿಗಾಗಿ ಅಲ್ಲ ಎಂದು ತಪ್ಪಾಗಿ ಯೋಚಿಸಬಾರದು ಎಂದು ಹೇಳಿದ್ದಾರೆ.

ಕೇಂದ್ರ ಸರಕಾರ ತನ್ನ ರಾಜೀನಾಮೆ ಅಂಗೀಕಾರ ಮಾಡಿದ ನಂತರ ನನ್ನ ಮುಂದಿನ ನಿಲುವು ಏನೆಂದು ತಿಳಿಸುತ್ತೇನೆ ಎಂದು ಹೇಳಿದ್ದಾರೆ.‌

ಸಾಮಾಜಿಕ ಜಾಲಾತಾಣದಲ್ಲಿ ಕೊಯಮತ್ತೂರಿನಲ್ಲಿ ಆರ್.ಎಸ್.ಎಸ್ ಕಚೇರಿ ತೆರೆದು ಕಾರ್ಯ ನಿರ್ವಹಿಸುವ ಬಗ್ಗೆ ಸುಳ್ಳು ಸುದ್ದಿ ಹರಡಿತ್ತು. ಜನರು ಕೂಡ ಈ ಸುಳ್ಳು ಸುದ್ದಿಯ ಬಗ್ಗೆ ವ್ಯಾಪಕ ಗೊಂದಲದಲ್ಲಿದ್ದರು ಇದೀಗ ಸ್ಪಷ್ಟಗೊಂಡಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.