ಉಡುಪಿ: ಅನಿಲ್ ಶೆಟ್ಟಿ ಬಡ ರೈತ ಕುಟುಂಬದಲ್ಲಿ ಬೆಳೆದ ಯುವಕ. ಉಡುಪಿ ಜಿಲ್ಲೆಯ ಶಂಕರನಾರಾಯಣ ಊರಿನವನು.ಕಾಡಿನ ಮಧ್ಯದಲ್ಲಿ ಈತನ ಮನೆ. ತಂದೆ ಸಣ್ಣ ತುಂಡು ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದರು. ಆದರೆ ಅದರಿಂದ ಬರುವ ಆದಾಯದಿಂದ ಜೀವನ ನಡೆಸುವುದು ಕಷ್ಟ!

ರಾತ್ರಿ ಹೊತ್ತು ಸೀಮೆಎಣ್ಣೆ ದೀಪದಲ್ಲಿ ಓದುತ್ತಿದ್ದ ಬಾಲಕ ಕಷ್ಟಪಟ್ಟು ಓದಿ ಪಿಯುಸಿಯಲ್ಲಿ 95% ಅಂಕ ಗಳಿಸಿದ. ಸಿಇಟಿಯಲ್ಲಿ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೀಟು ಸಿಕ್ಕಿತ್ತು. ಆದರೆ 15,500/ ಶುಲ್ಕ ಭರಿಸಲು ಕಷ್ಟಕರವಾಗಿತ್ತು. ಅನಿಲ್ ಪ್ರಕಾರ ಅವರು ಸಾಲ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲೂ ಇರಲಿಲ್ಲ. ತಂದೆ ಸಾಲ ಮಾಡಿ ತೀರಿಸಲು ಕಷ್ಟ ಪಡುತ್ತಿದ್ದ ಕಾಲ! 2005 ರಲ್ಲಿ ಅನಿಲ್ ಶೆಟ್ಟಿ ಬೆಂಗಳೂರಿಗೆ ಬಂದಾಗ ಅವರ ಬಳಿಯಿದ್ದದ್ದು 70 ರೂಪಾಯಿಗಳು ಮಾತ್ರ! ನಂತರ ಅವರ ಚಿಕ್ಕಪ್ಪ ಶುಲ್ಕ ಕಟ್ಟುತ್ತಾರೆ. ತನ್ನ ಖರ್ಚು ಭರಿಸಲು ಸ್ವೀಟ್ ಅಂಗಡಿಯಲ್ಲಿ ಸೇರಿಕೊಂಡೆ ಎಂದು ತನ್ನ ಗತ ಅನುಭವವನ್ನು ಹಂಚಿಕೊಳ್ಳುತ್ತಾರೆ.

ನಂತರ ಅವರು ಒಂದು ಉದ್ದಿಮೆಯನ್ನು ಆರಂಭಿಸುತ್ತಾರೆ. ಮೂರು ವರ್ಷದ ನಂತರ ಮುಂಬೈ ಹೋಗಿ ಫ್ಲೈ ವಿದ್ ಸೆಲೆಬ್ರಿಟಿಸ್ ಉದ್ದಿಮೆಯನ್ನು ಆರಂಭಿಸಿ ಪ್ರತಿಷ್ಠಿತ ವ್ಯಕ್ತಿಗಳೊಂದಿಗೆ ವ್ಯವಹಾರ ಸ್ಥಾಪಿಸುವಲ್ಲಿ ಯಶಸ್ವಿಯಾಗುತ್ತಾರೆ.

ತನ್ನ ಬಾಲ್ಯದಲ್ಲಿ ಅನುಭವಿಸಿದ ಕಷ್ಟ, ಅನ್ಯಾಯವನ್ನು ಇತರ ಮಕ್ಕಳು ಅನುಭವಿಸಬಾರದೆಂದು “ಸರಕಾರಿ ಶಾಲೆ” ಉಳಿಸಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಸರಕಾರ ನಡೆಸುತ್ತಿರುವ ಸುಮಾರು 50000 ಸಾವಿರ ಶಾಲೆಗಳಲ್ಲಿ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳುವುದು ಅವರ ಮುಖ್ಯ ಉದ್ದೇಶ‌. ಈ ಅಭಿಯಾನಕ್ಕೆ ತನ್ನ ಉದ್ದಿಮೆಯ ನೆಟ್ ವರ್ಕ್ ಬಳಸಿಕೊಳ್ಳುತ್ತಿದ್ದು ಕನ್ನಡ ಚಿತ್ರ ರಂಗ ತಾರೆಯರು ಕೂಡ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಕನ್ನಡ ಚಿತ್ರ ರಂಗದ ರಿಷಬ್ ಶೆಟ್ಟಿ, ರಾಗಿಣಿ ತ್ರಿವೇದಿ, ಪ್ರಜ್ವಲ್ ದೇವರಾಜ್ ಸೇರಿದಂತೆ ಅನೇಕ ಮಂದಿ ಕೈ ಜೋಡಿಸಿದ್ದಾರೆ. ಅನಿಲ್ ಶೆಟ್ಟಿ ಸ್ವತಃ ತಮ್ಮ ಕೈಯಿಂದ ಎಂಟು ಲಕ್ಷ ರೂಪಾಯಿಯನ್ನು ಸರಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಹಾಕಿದ್ದಾರೆ.

ಅನಿಲ್ ಅವರ ಪ್ರಕಾರ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಸಿಗಬೇಕು. ಆದರೆ ಇಂದು ಸರಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ದೊಡ್ಡ ಮಟ್ಟದ ಅಂತರವಿದೆ. ಪೋಷಕರ ಬಳಿ ಹಣಯಿಲ್ಲವೆಂಬ ಕಾರಣಕ್ಕೆ ಶಿಕ್ಷಣ ವಂಚಿತರಾಗಬಾರದೆಂದು ಅನಿಲ್ ಹೇಳಿದ್ದಾರೆ.

ಈ ಅಭಿಯಾನದ ಮೂಲಕ ಸುಮಾರು 50000 ಸಾವಿರ ಶಾಲೆಗಳ ಮೂಲಭೂತ ಸೌಕರ್ಯ ಸುಧಾರಿಸಲು ಪಣತೊಟ್ಟಿರುವ ಅನಿಲ್ ಶೆಟ್ಟಿ, ಲಕ್ಷಾಂತರ ಮಕ್ಕಳ ಬಾಳಲ್ಲಿ ಬೆಳಕಾಗಲು ಮುಂದಾಗಿದ್ದಾರೆ. ಇವರಿಗೆ ಕೊಸ್ಟಲ್ ಮಿರರ್ ತಂಡದಿಂದ ಬಿಗ್ ಸೆಲ್ಯೂಟ್.

ಇವರನ್ನು ಸಂಪರ್ಕಿಸಲು ಇಷ್ಟ ಪಟ್ಟರೆ ಈ ಕೆಳಗಿನ ಇಮೇಲ್ ಐಡಿ ಮುಖಾಂತರ ಸಂಪರ್ಕಿಸಬಹುದಾಗಿದೆ.

[email protected]

ಮಾಹಿತಿ ಚಿತ್ರ ಕೃಪೆ: ಬೆಟರ್ ಇಂಡಿಯಾ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.