ಸೌದಿ ಅರೇಬಿಯಾ: ಸರಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಂಬ ಕಾರಣಕ್ಕೆ ಐದು ವರ್ಷದ ಮುಂಚೆ ಹದಿಮೂರು ವರ್ಷದ ಮುರ್ತಜ ಕ್ವೆರೀರಿಸ್ ಎಂಬ ಬಾಲಕನನ್ನು ಸೌದಿ ಆಡಳಿತ ಬಂಧಿಸಿತ್ತು. ಇದೀಗ ಆತನಿಗೆ ಹದಿನೆಂಟು ವರ್ಷ. ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಕಾರಣಕ್ಕೆ ಆತನಿಗೆ ಮರಣ ದಂಡನೆ ಶಿಕ್ಷೆ ಘೋಷಿಸಲಾಗಿದೆ.

ಸೌದಿ ಆಡಳಿತ ನಿರ್ಧಾರವನ್ನು ಖಂಡಿಸಿರುವ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಮಾನವ ಹಕ್ಕು ಸಂಘಟನೆಯು ಮರಣ ದಂಡನೆ ಶಿಕ್ಷೆಯನ್ನು ವಾಪಸು ಪಡೆಯುವಂತೆ ಆಗ್ರಹಿಸಿದೆ.

ಬಾಲಕನ ಮೇಲೆ ಪ್ರತಿಭಟನೆಯಲ್ಲಿ ಭಾಗವಹಿಸುವಿಕೆ, ಪ್ರತಿಭಟನೆಯಲ್ಲಿ ಮೃತ ಪಟ್ಟ ಆತನ ಅಣ್ಣನ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಿಕೆ, ಪೊಲೀಸರತ್ತ ಕೊಕ್ಟೈಲ್ ಪಾನೀಯ ಎಸೆತ, ಭಯೋತ್ಪಾದಕ ಸಂಘಟನೆಯೊಂದಿಗೆ ಸೇರುವಿಕೆಯ ಆರೋಪಗಳನ್ನು ಹಾಕಿ ಈ ಶಿಕ್ಷೆ ವಿಧಿಸಲಾಗಿದೆ.

ಸಿ.ಎನ್.ಎನ್ ಬಿಡುಗಡೆ ಮಾಡಿದ ವೀಡಿಯೋ ದಲ್ಲಿ ಬಾಲಕ ಸರಕಾರದ ವಿರುದ್ಧ ಸೈಕಲ್ ರ಼್ಯಾಲಿಯಲ್ಲಿ ಇತರ ಬಾಲಕರೊಂದಿಗೆ ಸೇರಿ ಭಾಗವಹಿಸಿದ್ದನ್ನು ಕಾಣಬಹುದಾಗಿದೆ. ಅಮ್ನೆಸ್ಟಿ ಇಂಟರ್ ನ್ಯಾಶನಲ್ ಪ್ರಕಾರ ಬಾಲಕನಿಗೆ ಬಂಧಿಸಿದ ನಂತರ ವಕೀಲರ ಭೇಟಿ ನಿರಾಕರಿಸಲಾಗಿತ್ತು.‌2018 ರಲ್ಲಿ ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಮಾತ್ರ ವಕೀಲರನ್ನು ಭೇಟಿ ಮಾಡಿಸಲಾಯಿತು. ಬಾಲಕನ ಮೇಲೆ ವಿಚಾರಣೆಯ ಸಂದರ್ಭದಲ್ಲಿ ದೌರ್ಜನ್ಯ ಎಸಗಲಾಗಿದ್ದು, ತಪ್ಪು ಒಪ್ಪಿಕೊಂಡರೆ ಬಿಡುಗಡೆ ಮಾಡಲಾಗುವುದು ಎಂದು ಬೆದರಿಸಲಾಗಿದೆ ಎಂದು ಅಮ್ನೆಸ್ಟಿ ಆರೋಪಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.