ಪ್ಲಾಸ್ಟಿಕ್ ಬಿಟ್ಹಾಕಿ, ಹಳೇ ಫ್ಯಾಷನ್‌ ಆದರೂ ಬಟ್ಟೆಚೀಲ ಬಳಸಿ: ಅಮಿತ್ ಶಾ

125
Amit Shah. (File Photo: IANS)

ಅಹಮದಾಬಾದ್‌: ಮಾಲಿನ್ಯ ತಡೆದು ಪರಿಸರದ ರಕ್ಷಣೆಗಾಗಿ ಜನತೆ ಹಳೇ ಮಾದರಿಯ ಹಾಗೂ ಹೆಚ್ಚು ಬಾಳಿಕೆ ಬರುವ ಬಟ್ಟೆಗಳ ಬ್ಯಾಗ್‌ ಬಳಸಬೇಕು ಇದರಿಂದ ಪ್ಲಾಸ್ಟಿಕ್ ಮಾಲಿನ್ಯದಿಂದ ಭೂಮಿಯನ್ನು ರಕ್ಷಿಸಬಹುದು. ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಹಿಳೆಯರಿಗೆ ಕರೆ ಕೊಟ್ಟಿದ್ದಾರೆ.

ಅಹಮದಾಬಾದ್‌ ನಗರಪಾಲಿಕೆ ಬುಧವಾರ ಆಯೋಜಿಸಿದ್ದ 10 ಲಕ್ಷ ಸಸಿ ನೆಡುವ ಮುಕ್ತಾಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು,ಎಲ್ಲರೂ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು.ಬಟ್ಟೆಯ ಚೀಲಗಳು ಹಳೇ ಮಾದರಿ ಫ್ಯಾಷನ್‌ ಆಗಿದ್ದರೂ ಅದನ್ನೇ ಬಳಸುವ ಪ್ರಯತ್ನ ಮಾಡಬೇಕು.ಇಂಥ ಕ್ರಮಗಳಿಂದ ಪ್ಲಾಸ್ಟಿಕ್‌ ಮಾಲಿನ್ಯದಿಂದ ಭೂಮಿಯನ್ನು ರಕ್ಷಿಸಬಹುದು. ಅಲ್ಲದೆ, ಒಂದೇ ಬಾರಿ ಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ಉತ್ಪಾದನೆ ಸ್ಥಗಿತಗೊಳಿಸಲು ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಿದರು.

1 COMMENT

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.