ಉಡುಪಿಯ ಪರ್ಯಾಯ ಮಹೋತ್ಸವವನ್ನೂ ರಾಜಕೀಯ ಲಾಭಕ್ಕೆ ಬಳಸಿದ ಉಡುಪಿ ಬಿಜೆಪಿಯ ಕಾರ್ಯಕ್ರಮಕ್ಕೆ ಖಂಡನೆ :ಅಮೃತ್ ಶೆಣೈ

0
116

ಉಡುಪಿ: ಪರ್ಯಾಯ ಮಹೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿಯವರು ಸಿಎಎ ಬೆಂಬಲ ಪಡೆಯುವ ರಾಜಕೀಯ ಕಾರ್ಯಕ್ರಮ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಆರ್.ಎಸ್ ಸಮಿತಿಯ ಮುಖಂಡ ಅಮೃತ್ ಶೆಣೈ, ಉಡುಪಿಯ ಪರ್ಯಾಯ ಮಹೋತ್ಸವ ಕೃಷ್ಣ ಮಠದವರದಾದರೂ ಎಲ್ಲರೂ ನಾಡ ಹಬ್ಬವಾಗಿ ಆಚರಿಸುತ್ತಾರೆ.ಹತ್ತಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತವೆ ,ನಾನು ಕೂಡ ಪ್ರತಿ ಪರ್ಯಾಯಕ್ಕೆ” ಕಲಾ ಸಂಗಮ ” ಎಂಬ ಕಾರ್ಯಕ್ರಮ ಸಂಯೋಜನೆ ಮಾಡುತ್ತಿದ್ದೆ ,ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ಕರೆದು ಯಾವುದೇ ಒಂದು ಪಕ್ಷದ ಪ್ರಚಾರ ಆಗಬಾರದು ಎಂಬ ವಿಶೇಷ ಜಾಗ್ರತೆಯಲ್ಲಿ ಮಾಡುತ್ತಿದ್ದೆನು,ಈ ಬಾರಿ ವೈಯಕ್ತಿಕ ಕಾರಣಗಳಿಂದ ಮಾಡಿಲ್ಲ ,ಮುಂದೆ ಮಾಡುವೆನು ಎಂದಿದ್ದಾರೆ.

ಕಿನ್ನಿಮೂಲ್ಕಿಯಲ್ಲಿ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿಯವರೂ
ಅದ್ದೂರಿಯಿಂದ ಮಾಡುತ್ತಾರೆ.ಇತರ ಕಡೆಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳೂ ರಾಜಕೀಯ ರಹಿತವಾಗಿ ಆಗುತ್ತವೆ.ಆದರೆ ನಿನ್ನೆ ಬಿಜೆಪಿ ಪರ್ಯಾಯಕ್ಕೆ ಬಂದ ಭಕ್ತಾದಿಗಳು ಲಕ್ಷಾಂತರ ಸಂಖ್ಯೆ ಯಲ್ಲಿ ಇರುವುದರ ಲಾಭ ಪಡೆಯಲು ರಾಜಕೀಯ ಕಾರ್ಯಕ್ರಮ ಮಾಡಿದ್ದಾರೆ, ಜನ ಬಹುಮತ ಕೊಟ್ಟರೂ ಇವರಲ್ಲಿ ಇಷ್ಟೊಂದು ಆಭದ್ರತೆ ಏಕೆ ಎಂದು ಪ್ರಶ್ನಿಸಿದ್ದಾರೆ.

ಪರ್ಯಾಯದ ಸಡಗರಕ್ಕೆ ಭಂಗ ಬರಬಾರದು ಎಂದು ಸಿಎಎ ವಿರೋಧಿಸುವ ಕೆಲವರಿಗೆ ನಾನು ಪ್ರತಿಭಟನಾ ಸಭೆಯನ್ನು ಪರ್ಯಾಯದ ನಂತರನೇ ಮಾಡೋಣ ಅಂದಿದ್ದೆ ,ಆದರೆ ಇವರು ಪರ್ಯಾಯದಂದೇ ಮಾಡಿದ್ದಾರೆ.ಇದು ಬಿಜೆಪಿಯ ಬೌಧ್ದಿಕ ದಿವಾಳಿತನ ವನ್ನು ತೋರಿಸುತ್ತದೆ.ಶ್ರೀ ಕೃಷ್ಣ ದೇವರೇ ಇವರಿಗೆ ಸದ್ಬುಧ್ದಿ ಕೊಡಲಿ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here