ವಾಷಿಂಗ್ಟನ್: ಅಮೇರಿಕಾದಿಂದ ಭಾರತಕ್ಕೆ ಶಸ್ತ್ರಸಜ್ಜಿತ ಡ್ರೋಣ್ ಗಳು ಬರಲಿವೆ. ಶಸ್ತ್ರ ಸಜ್ಜಿತ ಡ್ರೋನ್ಗಳು ಹಾಗೂ ಸಮಗ್ರ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತಕ್ಕೆ ಮಾರಾಟ ಮಾಡಲು ಅಮೇರಿಕಾ ಸರ್ಕಾರ ಸಮ್ಮತಿಸಿದೆ.

ಭಾರತಕ್ಕೆ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಅಮೆರಿಕದ ಈ ಕ್ರಮ ಮಹತ್ವದ್ದು. ಆದರೆ ಯಾವಾಗ ಈ ಮಾರಾಟ ನಡೆಯುತ್ತದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಇಂತಹ ಡ್ರೋನ್ಗಳನ್ನು ಭಾರತಕ್ಕೆ ಒದಗಿಸಲು ನಿರ್ಧರಿಸಲಾಗಿದೆ. ಅಲ್ಲದೇ, ಈಗ ಅಮೆರಿಕ ಗಾರ್ಡಿಯನ್ ಡ್ರೋನ್ಗಳ ಶಸ್ತ್ರ ಸಜ್ಜಿತ ಆವೃತ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಈ ಶಸ್ತ್ರಸಜ್ಜಿತ ಡ್ರೋಣ್ ಗಳ ಆಗಮನದಿಂದ ಭಾರತಕ್ಕೆ ಮತ್ತಷ್ಟು ಬಲ ಬರಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.