ಉಡುಪಿ : ಪ್ರಗತಿಪರ ಚಿಂತಕ, ಜನ ಸಾಮಾನ್ಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಏ. ಕೆ.ಸುಬ್ಬಯ್ಯನವರ ನಿಧನಕ್ಕೆ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತ ಪಡಿಸುತ್ತದೆ. ಹಿಂದಿನ ಜನಸಂಘದ (ಈಗಿನ ಬಿಜೆಪಿ) ಸ್ಥಾಪಕ ಮುಖಂಡರಾಗಿದ್ದ ಸಬ್ಬಯ್ಯನವರು ಹೈ ಕೋರ್ಟ್ ವಕೀಲರಾಗಿದ್ದರು. ಬಿಜೆಪಿ ಮತ್ತು ಆರ್.ಎಸ್.ಎಸ್.ನ ಕೋಮುವಾದಿ ನೀತಿಯಿಂದ ಬೇಸತ್ತು ಅದರಿಂದ ದೂರ ಸರಿದು ಪ್ರಗತಿಪರ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಅವರು ಬರೆದ ಆರ್.ಎಸ್.ಎಸ್.ನ ಅಂತರಂಗ ಸಾವಿರಾರು ಪ್ರತಿಗಳು ಮಾರಾಟವಾಗಿತ್ತು. ಅದೊಂದು ಸೇವಾ ಸಂಘಟನೆ ಅಲ್ಲ, ಕೋಮುವಾದವನ್ನು ಬಿತ್ತುವ ಕೆಲಸ ಮಾಡುತ್ತದೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು. ಕೊಡಗಿನ ಜನರ ಭೂಮಿ ಹಕ್ಕಿಗಾಗಿಯು ಹೋರಾಟ ನಡೆಸಿದ್ದರು. ಅವರ ನಿಧನದಂದಾಗಿ ಒಬ್ಬ ಧೀಮಂತ ಹೋರಾಟಗಾರರನ್ನು, ಪ್ರಜಾಪ್ರಭುತ್ವವಾದಿ, ಜಾತ್ಯಾತೀತತೆಯನ್ನು ಸಾರುವ ವ್ಯಕ್ತಿಯನ್ನು ಕಳಕೊಂಡಿದ್ದೇವೆ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತದೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.