ಲೇಖಕಿ: ಚೈತ್ರಿಕಾ ನಾಯ್ಕ ಹರ್ಗಿ

ಮೋದಿ 2014 ಮೇ ನಲ್ಲಿ ಅಧಿಕಾರ ಸ್ವೀಕರಿಸುತ್ತಿದ್ದ ಹಾಗೆ ಮೊದಲೆ ಕರಾವಳಿಯಲ್ಲಿ ಇದ್ದ ನಾಯಿಕೊಡೆ ಅದಾನಿ ಗ್ರೂಪ್ ಅಗಸ್ಟ್ ನಲ್ಲಿ ಕರಾವಳಿಯಲ್ಲಿ ಗಟ್ಟಿನೆಲೆ ಕಂಡುಕೊಂಡಿತು. 2014 ಆಗಸ್ಟ್ ನಲ್ಲಿ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ ನ್ನು ಅದಾನಿ ಕೊಂಡುಕೊಳ್ಳುತ್ತಾರೆ. ನಂತರ ಇತ್ತೀಚೆಗೆ ಮಂಗಳೂರಿನ ವಿಮಾನ ನಿಲ್ದಾಣ ಕೂಡ ಮೋದಿ ಕೃಪಾಕಟಾಕ್ಷದಡಿ 50 ವರ್ಷಗಳಿಗೆ ಅದಾನಿ ಗ್ರೂಪ್ ಗೆ ಮಾರಲಾಗಿದೆ. ಇಷ್ಟೆ ಅಲ್ಲದೆ ಈ ಹಿಂದೆ 2008ರಲ್ಲಿ ಮಂಗಳೂರಿನಲ್ಲಿ ಅದಾನಿ ವಿಲ್ಮರ್ ಕೂಡ ಇತ್ತು.

ಈಗ ದೇನಾ, ಬರೋಡಾ ವಿಜಯ್ ಬ್ಯಾಂಕ್ ಲೀನಗೊಂಡು. ವಿಜಯಾ ಬ್ಯಾಂಕ್ ಅಸ್ಥಿತ್ವವನ್ನು ನಿರ್ನಾಮ ಮಾಡಿಯಾಯಿತು. ಇನ್ನು ಮುಂದಿನ ನೇಮಕಾತಿ ಮತ್ತು ಆಡಳಿತ ಮಂಡಳಿಯಲ್ಲಿ ಮೀಸಲು ಸ್ಥಾನಕ್ಕಷ್ಟೆ ಸೀಮಿತ ನಾವು.

ನಾನೇನು ಅತಿಯಾದ ಪ್ರಾಂತೀಯ ಭಾವದಿಂದ ಮಾತನಾಡುತ್ತಿಲ್ಲ. ಅತಿಯಾದ ಪ್ರಾಂತೀಯತೆ ಒಳ್ಳೆಯದಲ್ಲ. ಆದರೆ, ಪ್ರಾದೇಶಿಕ ಅಭಿವೃದ್ಧಿ ಯಲ್ಲಿ ಸ್ಥಳೀಯರ ಹೂಡಿಕೆ ಮತ್ತು ಪಾಲ್ಗೊಳ್ಳುವಿಕೆಯ ಬಗೆಗಿನ ಪ್ರಶ್ನೆ ಅದು. ಒಂದು ಪ್ರದೇಶದ ಜನರ ಹಿತಾಸಕ್ತಿ ಉಳಿಯಬೇಕೆಂದರೆ, ರಾಜಕೀಯ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ವಿಷಯದಲ್ಲಿ ಅತಿಯಲ್ಲದ ಪ್ರಾಂತೀಯತೆ ನಮ್ಮತನವನ್ನು ಉಳಿಸಿಕೊಳ್ಳಲು ಅಗತ್ಯ ಕೂಡ.

ಹೂಡಿಕೆಯ ವಿಷಯದಲ್ಲೂ ಹಾಗೆಯೇ. ಒಂದು ಕಂಪನಿಗೆ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಚೆನ್ನಾಗಿ ತಿಳಿಯುವಲ್ಲಿ, ಸಾಮಾಜಿಕ ಕೆಲಸದಲ್ಲಿ ತನ್ನನ್ನು ಕಂಪನಿ ತನ್ನನ್ನು ತೊಡಗಿಸಿಕೊಳ್ಳಲು ಕಂಪನಿ ಆಡಳಿತ ಮತ್ತು ಮಾಲಿಕ ಯಾರು ಎನ್ನುವುದು ಕೂಡ ಮುಖ್ಯ ವಾಗುತ್ತದೆ.

ಆದರೆ ಇಲ್ಲಿ ಪ್ರಾಂತೀಯ, ಭಾಷಿಕ, ಸಾಂಸ್ಕೃತಿಕರಾಗಿ ಜಾಗ್ರತ ರಾಗಿರುವ ಹಾಗೆಯೇ ಹೂಡಿಕೆ ಮತ್ತು ಅದರಲ್ಲೂ ಜಾಸ್ತಿ ವ್ಯಾಪಾರ ಚಾಣಾಕ್ಷತೆ ಇರುವ ಮಂಗಳೂರು ಉಡುಪಿ ಜನತೆಗೆ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ ಅನ್ನು ಉಳಿಸಿಕೊಳ್ಳಲಾಗಲಿಲ್ಲ.

ಇದೊಂದು ಘಟನೆ ನೋಡಿ – ಉಡುಪಿಯ ಅದಾನಿ ಪವರ್ ಕಾರ್ಪೊರೇಷನ್ ಗೆ 2014-15 ಹಣಕಾಸು ವರ್ಷದಲ್ಲಿ ಗೋಲ್ಡನ್ ಪಿಕಾಕ್ ಇನ್ವಿರಾನ್ಮೆಂಟ್ ಮ್ಯಾನೆಜ್ಮೆಂಟ್ ಅವಾರ್ಡ್ ಕೂಡ ಬರುತ್ತದೆ. ವಿಪರ್ಯಾಸ ಎಂದರೆ 2018 ರಲ್ಲಿ ಉಡುಪಿಯಲ್ಲಿ ಇದೇ ಅದಾನಿ ಕಂಪನಿಯ ಬೇಜವಾಬ್ದಾರಿಯಿಂದ ಬೂದಿ ಮಳೆಯಾಗಿ ಅಲ್ಲಿನ ಪರಿಸರ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿದೆ. ಈಗ 5 ಕೋಟಿ ದಂಡವನ್ನು ನ್ಯಾಯಾಧಿಕರಣದ ವಿಧಿಸಿದ್ದರೂ ಜನತೆ ಆರೋಗ್ಯವನ್ನು ಪರಿಸರ ವ್ಯವಸ್ಥೆಯ ಸುತ್ತೋಲೆಯನ್ನು ಈ ಕ್ಷಣಕ್ಕೆ ವಾಪಸ್ಸು ತರಲಾಗದು.

ಬನ್ನಿ ನಾವು ಕರ್ನಾಟಕದ ಮಂದಿ

ಉಡುಪಿ ಪವರ್ ಕಾರ್ಪೊರೇಷನ್
ಅದಾನಿ ವಿಲ್ಮರ್ ಮಂಗಳೂರು
ಅದಾನಿ ಬ್ಯಾಡಗಿ ಸೋಲಾರ್ ಪ್ರೊಜೆಕ್ಟ್
ಅದಾನಿ ಪವರ್ ಪ್ಲಾಂಟ್ ಯೆಲಬುರ್ಗಾ
ಅದಾನಿ ಕಾರ್ಪೊರೇಟ್ ಆಫಿಸ್ ಇಸ್ಲಾಮ್ ಪುರ
ಅದಾನಿ ಸೋಲಾರ್ ಪ್ಲಾಂಟ್ ಶೋರಾಪುರ್
ಅದಾನಿ ಸೋಲಾರ್ ಪಾರ್ಕ್ ಥಿರುಮಣಿ
ಅದಾನಿ ವಿಲ್ಮರ್ ಲಿಮಿಟೆಡ್ ಹುಬ್ಬಳ್ಳಿ
ಅದಾನಿ ಎಂಟರ್ ಪ್ರೈಸಸ್ ಬೆಂಗಳೂರು
ಅದಾನಿ ವಿಲ್ಮರ್ ನಂಜನಗೂಡು
ಬರೋಡಾ ಬ್ಯಾಂಕ್

ಇಲ್ಲೆಲ್ಲಾ ಕರ್ನಾಟಕದಲ್ಲಿರುವ ಸೆಕ್ಯೂರಿಟಿಗಳನ್ನ ಓಡಿಸಿ ಚೌಕಿದಾರರಾಗೋಣ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.