ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ಇಂದು ‘ಏರ್​ಫೋರ್ಸ್​ ಡೇ’ ದಿನದ ಸಂಭ್ರಮ. ಭಾರತೀಯ ವಾಯುಸೇನೆಯ ದಿನವನ್ನ ಅದ್ಧೂರಿಯಾಗಿ ಆಚರಿಸಲಾಗ್ತಿದೆ. ವೀರಯೋಧ ವಿಂಗ್ ಕಮಾಂಡರ್ ಅಭಿನಂದನ್ ಕೂಡ ವಾಯು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ತಮ್ಮ ನೇತೃತ್ವದಲ್ಲಿ ಮಿಗ್ ಫಾರ್ಮೇಶನ್ ಪ್ರದರ್ಶನ ನಡೆಸಿದ ಅಭಿನಂದನ್ ಮಿಗ್ ಬಿಸನ್ ಹೆಸರಿನ ಯುದ್ಧ ವಿಮಾನವನ್ನು ಹಾರಿಸಿದರು. ಮೈ ರೋಮಾಂಚನ ಗೊಳಿಸುವ ಪ್ರದರ್ಶನವನ್ನ ನೆರೆದ ಜನರು ಕಣ್ತುಂಬಿಕೊಂಡಿದ್ದಾರೆ. ಈ ಮೂಲಕ ಏರ್​ಫೋರ್ಸ್​ ಡೇ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.