ಹೊಸದಿಲ್ಲಿ: ನಮ್ಮ ದೇಶದ ಹೆಮ್ಮೆಯ ವಾಯುಸೇನೆಯ 87ನೇ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ದೆಹಲಿಯ ಹಿಂದಾನ್ ಬೇಸ್ ನಲ್ಲಿ ಆಧುನಿಕ ಮತ್ತು ವಿಂಟೆಜ್ ಯುದ್ದ ವಿಮಾನಗಳ ಪ್ರದರ್ಶನ ನಡೆಯುತ್ತಿದೆ.

ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್, ವಾಯುಸೇನಾ ಮುಖ್ಯಸ್ಥ ಆರ್ ಕೆಎಸ್ ಭದೌರಿಯಾ ಮತ್ತು ನೌಕಾಪಡೆ ಮುಖ್ಯಸ್ಥ ಕರಂಬಬೀರ್ ಸಿಂಗ್ ರಾಷ್ಟ್ರೀಯ ಯುದ್ದ ಸ್ಮಾರಕಕ್ಕೆ ಗೌರವ ಅರ್ಪಣೆ ಮಾಡಿದ್ದಾರೆ.

ಭಾರತೀಯ ವಾಯುಪಡೆ 1932ರ ಅಕ್ಟೋಬರ್ 8ರಂದು ಆರಂಭವಾಗಿತ್ತು. ಹಲವಾರು ಯುದ್ದಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಹೆಮ್ಮೆ ಭಾರತೀಯ ವಾಯುಪಡೆಗಿದೆ. ಈ ವರ್ಷ ವಿಜಯ ದಶಮಿಯಂದೇ ವಾಯುಸೇನಾ ದಿನಾಚರಣೆ ನಡೆಯಲಿರುವುದಿಂದ ಸಂಭ್ರಮ ದುಪ್ಪಟ್ಟಾಗಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.