ಉಡುಪಿ – ಶಿವಮೊಗ್ಗ – ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಆಗುಂಬೆ ಘಾಟಿಯ 13 ತಿರುವಿನಲ್ಲಿ ಬೃಹತ್ ಆದ ಮರದ ಬಳ್ಳಿ ನೇತಾಡುತ್ತಿದ್ದು ಇದರಿಂದಾಗಿ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗಿದೆ. ಅರಣ್ಯ ಇಲಾಖೆಯವರು ಇದರ ಬಗ್ಗೆ ಯಾವುದೇ ಕ್ರಮವನ್ನು ಕೈಗೊಳ್ಳದೆ ಇರುವುದರಿಂದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮುಂಜಾನೆ ಉಡುಪಿಯಿಂದ ಶಿವಮೊಗ್ಗ ಕಡೆಗೆ ಪ್ರಯಾಣಿಸುತ್ತಿದ್ದ ಅಮೋಘ ಬಸ್, ನೇತಾಡುತ್ತಿದ್ದ ಬಳ್ಳಿಯನ್ನು ತಪ್ಪಿಸಲು ಹೋಗಿದ್ದು ಈ ಸಂದರ್ಭದಲ್ಲಿ ತೀರ್ಥಹಳ್ಳಿ ಕಡೆಯಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ಕ್ಯಾತ್ಯಾಯನಿ ಬಸ್ ಚಾಲಕ ರವಿಯವರು ಸಮಯ ಪ್ರಜ್ಞೆ ವಹಿಸಿ ಮುಖಾಮುಖಿ ಡಿಕ್ಕಿ ಸಂಭವಿಸುತ್ತಿದ್ದನ್ನು ತಪ್ಪಿಸಿ ರಸ್ತೆ ಬದಿಯ ಚರಂಡಿಗೆ ಇಳಿಸಿದ್ದು ಬಾರಿ ಅನಾಹುತದಿಂದ ಪ್ರಯಾಣಿಕರನ್ನು ಪಾರುಗೊಳಿಸಿದ್ದಾರೆ.

ಇನ್ನೂ ಮುಂದಾದರು ಸಂಬಂಧಪಟ್ಟ ಇಲಾಖೆಯವರು ಈ ಮರದ ಬಳ್ಳಿಯನ್ನು ತೆರೆವುಗೊಳಿಸಿ, ಸಾರ್ವಜನಿಕ ವಾಹನ ಸಂಚಾರಕ್ಕೆ ಅನುವುಮಾಡಿ ಸಂಭವಿಸಬಹುದಾದ ಅಪಘಾತಕ್ಕೆ ಪೂರ್ಣ ವಿರಾಮ ಹಾಕಬೇಕಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.