ಸೂರತ್: ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನು ಭಾರತ ವನಿತೆಯರು 2-0ಯಿಂದ ವಶಪಡಿಸಿದ್ದಾರೆ.5 ಪಂದ್ಯಗಳಲ್ಲಿ ಕೊನೆಯ ಟಿ20 ಪಂದ್ಯ ಉಳಿದಿದ್ದು, ಭಾರತ ಸರಣಿ ಗೆದ್ದಿದೆ. 

ಮಂಗಳವಾರ 4ನೇ ಟಿ20 ಭಾರತ 51 ರನ್ ಗಳಿಂದ ಜಯಭೇರಿ ಬಾರಿಸಿತು. ಮಳೆಯಿಂದ 3 ಓವರ್ ಕಡಿತವಾದ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ 140 ರನ್ ಪೇರಿಸಿತು. 15 ವರ್ಷದ ಶಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಭಾರತಕ್ಕೆ ನೆರವಾದರು. ಚೊಚ್ಚಲ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಶಫಾಲಿ ತಾವಾಡಿದ ಎರಡನೇ ಪಂದ್ಯದಲ್ಲಿ ಆಫ್ರಿಕಾ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್ ಗಳೊಂದಿಗೆ 46 ರನ್ ಬಾರಿಸಿ ಮಿಂಚಿದರು. ಶಫಾಲಿಗೆ ಜೆಮಿಯಾ ರೋಡ್ರಿಗರ್ಸ್ ಉತ್ತಮ ಸಾಥ್ ನೀಡಿದರು. ಜೆಮಿಯಾ 33 ರನ್ ಬಾರಿಸಿದರು. 

ದಕ್ಷಿಣ ಆಫ್ರಿಕಾ ಪರ ತಜ್ಮಿನ್ 20 ಹಾಗೂ ಲೌರಾ ವೋಲ್ವರ್ಡ್[23] ಹೊರತುಪಡಿಸಿ ಉಳಿದ್ಯಾವ ಆಟಗಾರ್ತಿಯರು ಎರಡಂಕಿ ಮೊತ್ತ ದಾಖಲಿಸಲಿಲ್ಲ. ಪೂನಂ ಯಾದವ್ 13 ರನ್ ನೀಡಿ 3 ವಿಕೆಟ್ ಪಡೆದರೆ, ರಾಧಾ ಯಾದವ್ 16 ರನ್ ನೀಡಿ 2 ವಿಕೆಟ್ ಪಡೆದರು.   

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.