ಉಡುಪಿ : ನಿಮ್ಮ ಹೊಸ ಆಧಾರ್ ನೊಂದಾವಣಿಯಾಗಲಿಲ್ಲವೇ? ನಿಮ್ಮ ಆಧಾರ್ ನಲ್ಲಿ ತಿದ್ದುಪಡಿಯಿದೆಯೇ ? ಹಾಗಾದರೆ ಇದೇ ಬರುವ ಡಿಸೆಂಬರ್ 26 ರಿಂದ 31 ರ ವರೆಗೆ ಮಣಿಪಾಲದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಐದು ದಿನಗಳ ಆಧಾರ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಇಲ್ಲಿ ನಿಮ್ಮ ಆಧಾರ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ತಿಳಿಸಿದ್ದಾರೆ. ನಿಮ್ಮ ಆಧಾರ್ ನಲ್ಲಿ ವಿಳಾಸ, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ನೊಂದವಣಿ ಸೇರಿದಂತೆ ಹಲವರು ತಿದ್ದುಪಡಿಗೆ ಈ ಐದು ದಿನಗಳಲ್ಲಿ ಮಾಡಲು ಸುವರ್ಣವಕಾಶ ಕಲ್ಪಿಸಲಾಗಿದೆ. ತಿಂಗಳುಗಳ ಕಾಲ ಕಾಯುವ ಬದಲು ಈ ಐದು ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಇಂದೇ ಸಮಯ ಮೀಸಲಿಡಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.