ಉಡುಪಿ.ಮಾ.08 : – ಉಡುಪಿಯ ಸರ್ಕಾರಿ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಸುಮಾರು 45 ವರ್ಷದ ಗಂಡಸೊಬ್ಬರು ಕಳೆದ ಒಂದು ವಾರದಿಂದ ಮನನೊಂದಂತೆ ತಿರುಗಾಡುತ್ತಿದ್ದಾರೆ. ವಿಷಯ ತಿಳಿದ ಸಮಾಜ ಸೇವಕ ವಿಶುಶೆಟ್ಟಿಯವರು ವ್ಯಕ್ತಿ ಇದ್ದಲ್ಲಿಗೆ ತೆರಳಿ ವಿಚಾರಿಸಿದಾಗ ವ್ಯಕ್ತಿಯು ತನಗೆ ಹಣಾಕಾಸಿನ ವಿಷಯದಲ್ಲಿ ಮೋಸವಾಗಿದ್ದು ಇದರಿಂದ ಮನೆಬಿಟ್ಟು ಬಂದಿರುವುದಾಗಿ ತಿಳಿಸಿರುತ್ತಾರೆ. ವ್ಯಕ್ತಿಯು ತನ್ನ ಹೆಸರು ಅಬ್ದುಲ್ ರಶಿದ್ ತಂದೆ ಅಬ್ದುಲ್ ರಹಿಂ ತಿರ್ಥಹಳ್ಳಿಯ ಸುಪ್ಪುಗುಡ್ಡೆ ಎಂದು ಹೆಳುತ್ತಿದ್ದಾರೆ. ಜೋತೆಗೆ ಶಿಕಾರಿಪುರ ಶಿವಮೊಗ್ಗ ಎಂದೂ ಹೇಳುತ್ತಿದ್ದಾರೆ. ಸಂಬಂಧಪಟ್ಟವರು ಇವರ ನೋವಿಗೆ ಸೂಕ್ತವಾಗಿ ಸ್ಪಂದಿಸಿದಲ್ಲಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ವ್ಯಕ್ತಿಯು ಉಡುಪಿಯ ಆದರ್ಶ ಆಸ್ಪತ್ರೆಯ ಎದುರುಗಡೆಯ ವಿಶ್ವೆಶ್ವರಯ್ಯ ಬಿಲ್ಡಿಂಗ್ ನ ಸುತ್ತಮುತ್ತಲಿನ ಪ್ರದೇಶದಲ್ಲಿ ತಿರುಗಾಡುತ್ತಿದ್ದಾರೆ.

ಆದ್ದರಿಂದ ಪರಿಚಯಸ್ಥರು ಅಥವಾ ಸಂಬಂಧಿಕರು ಯಾರಾದರು ಇದ್ದಲ್ಲಿ ಇವರ ನೋವಿಗೆ ನೆರವಾಗಿ ಸಹಕರಿಸಬೇಕೇಂದು ವಿಶು ಶೆಟ್ಟಿಯವರು ವಿನಂತಿಸಿಕೊಂಡಿದ್ದಾರೆ. ಮಾಹಿತಿಗಾಗಿ 9880614981 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.