ಬಿಹಾರ: ಇದುವರೆಗೆ ಶಂಕಿತ ಎನ್ಸೆಫಾಲಿಟಿಸ್ ರೋಗಕ್ಕೆ ಸುಮಾರು ಮೂವತ್ತನಾಲ್ಕು ಮಕ್ಕಳು ಮೃತರಾಗಿದ್ದು 133 ಮಕ್ಕಳು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಈ ಸಂಬಂಧ ದಾಖಲಾಗಿದ್ದಾರೆ.

ವೈದ್ಯರ ಪ್ರಕಾರ ಹೈಪೊಗ್ಲಿಸಿಮಿಯಾ ಇದಾಗಿದ್ದು ಅಂದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತಿದ್ದು ಸುಮಾರು 90% ಮಕ್ಕಳು ಇದರಿಂದ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವೆಂದು ಡಾ.ಎಸ್.ಕೆ ಸಹಿ ಅಭಿಪ್ರಾಯ ಪಟ್ಟಿದ್ದಾರೆ.

ವಿಪರೀತ ಜ್ವರ, ಗೊಂದಲ, ಕೋಮಾ ಈ ಎಇಎಸ್ ರೋಗದ ಲಕ್ಷಣಗಳಾಗಿದ್ದು ಮುಝಫರ್ಪುರ್ ನ ಎಲ್ಲ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಮಕ್ಕಳು ಭರ್ತಿಗೊಂಡಿದ್ದಾರೆ.

ಜನರಲ್ಲಿ ಈ ರೋಗದ ಬಗೆಗಿನ ಜ್ಞಾನದ ಕೊರತೆಯ ಕಾರಣ ಮತ್ತು ಮಾಹಿತಿಯ ಕೊರತೆಯ ಕಾರಣ ಹೆಚ್ಚಿನ ಸಾವು ಸಂಭವಿಸುತ್ತಿದೆಯೆಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.